ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಮುಂಗಾರು, ರಾಜ್ಯದಲ್ಲಿ ಮಳೆ ಕೊರತೆ

Rain001

ಬೆಂಗಳೂರು,ಆ.7- ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಚೇತರಿಕೆ ಕಾಣದೆ ದುರ್ಬಲವಾಗಿ ಮುಂದುವರೆಯುತ್ತಿರುವುದರಿಂದ ರಾಜ್ಯ ಮಳೆ ಕೊರತೆಯನ್ನು ಎದುರಿಸುವಂತಾಗಿದೆ.  ಆಗಸ್ಟ್ 5 ಮತ್ತು 6ರಂದು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.   ಮಲೆನಾಡು ಸೇರಿದಂತೆ ಕೆಲವೆಡೆ ಮಳೆಯಾಗಿದ್ದರೂ ವಾಡಿಕೆಯಷ್ಟು ಮಾತ್ರ ಮಳೆಯಾಗಿದೆ. ಕೆಲವೆಡೆ ಚದುರಿದಂತೆ ಮಳೆಯಾಗಿದೆಯೇ ಹೊರತು ವ್ಯಾಪಕ ಪ್ರಮಾಣದಲ್ಲಿ ರಾಜ್ಯಾದ್ಯಂತ ಮಳೆಯಾಗಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಹವಾ ಮುನ್ಸೂಚನೆಗಳು ಕೂಡ ಹೆಚ್ಚಿನ ಹಾಗೂ ವ್ಯಾಪಕ ಮಳೆ ತರುವ ಲಕ್ಷಣಗಳನ್ನು ನೀಡುತ್ತಿಲ್ಲ. ಆ.9ರ ನಂತರ ಮುಂಗಾರು ಚೇತರಿಕೆಯಾಗಬಹುದು ಎಂಬ ನಿರೀಕ್ಷೆ ಮಾಡಲಾಗಿದೆ. ಆದರೂ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಇದಕ್ಕೆ ಪೂರಕವಾದ ವಾತಾವರಣ ಕಂಡುಬರುತ್ತಿಲ್ಲ ಎಂದು ಹೇಳಿದರು. ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ಅವರ ಪ್ರಕಾರ ಇನ್ನು ಹತ್ತು ದಿನಗಳ ಕಾಲ ವ್ಯಾಪಕ ಹಾಗೂ ಭಾರೀ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿಲ್ಲ. ರಾಜ್ಯದಲ್ಲಿ ಚದುರಿದಂತೆ ಮಳೆಯಾಗುತ್ತಿದ್ದರೂ ಕೂಡ ಇನ್ನು 10 ದಿನಗಳ ಕಾಲ ಇದೇ ರೀತಿಯ ಕಷ್ಟ ಪರಿಸ್ಥಿತಿ ಮುಂದುವರೆಯುವ ಮುನ್ಸೂಚನೆಗಳೇ ಹೆಚ್ಚಾಗಿವೆ.

ರಾಜ್ಯದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದ್ದರೂ ದಕ್ಷಿಣ ಒಳನಾಡಿನಲ್ಲಿ ಮಳೆ ಕೊರತೆ ಹೆಚ್ಚಾಗಿ ಕಂಡುಬಂದಿದೆ. ಜಲಾಶಯಗಳಿಗೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಂದಿಲ್ಲ. ಹೀಗಾಗಿ ರೈತ ಸಮುದಾಯ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin