ವಿಷಪೂರಿತ ಅಣಬೆ ತಿಂದು ಐವರು ಅಸ್ವಸ್ಥ

ವಿಜಯಪುರ, ಆ.7- ಜಮೀನಿನಲ್ಲಿ ಬೆಳೆದಿದ್ದ ವಿಷಪೂರಿತ ಅಣಬೆ ತಿಂದು ಮಹಿಳೆ ಸೇರಿ ಐದು ಮಂದಿ ಅಸ್ವಸ್ಥರಾಗಿರುವ ಘಟನೆ ಸಿಂಧಗಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಧಗಿ ತಾಲ್ಲೂಕಿನ ಅಂತರಗಂಗೆ ಗ್ರಾಮದ ಮಹದೇವಿ ಅತನೂರ ಎಂಬುವರು ಇತ್ತೀಚೆಗೆ ಜಮೀನಿನಲ್ಲಿ ಅಣಬೆ ಬೆಳೆದಿದ್ದರು.
ಈ ಅಣಬೆಗಳನ್ನು ತಂದು ಆಹಾರ ತಯಾರಿಸಿ ಮಕ್ಕಳಾದ ಅರುಣಾ ಅತನೂರ (7), ಶೃತಿ(7), ಅನನ್ಯ(8) ಅವರಿಗೆ ಬಡಿಸಿದ್ದಲ್ಲದೆ, ಮಹದೇವಿ (35) ಮತ್ತು ಸುಮಂಗಲಾ ಪೂಜಾರಿ (35) ಎಂಬುವರು ತಿಂದಿದ್ದಾರೆ.

ಅಣಬೆ ಆಹಾರ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಇವರಿಗೆಲ್ಲರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ನೆರೆಹೊರೆಯವರು ಇವರನ್ನು ಸಿಂಧಗಿ ತಾಲ್ಲೂಕಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಸಿಂಧಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin