11.44 ಲಕ್ಷ ನಕಲಿ ಪ್ಯಾನ್ ಕಾರ್ಡ್ ಪತ್ತೆ..!

PAN-CARD

ನವದೆಹಲಿ, ಆ.7-ಜುಲೈ 27ರ ವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್‍ಗಳನ್ನು ಪತ್ತೆ ಹಚ್ಚಲಾಗಿದ್ದು, ಅವುಗಳನ್ನು ಸರ್ಕಾರ ನಿಷ್ಕ್ರಿಯ ಮಾಡಿದೆ. ಸರ್ಕಾರದ ನಿಯಮ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಸಂಖ್ಯೆಯನ್ನು ಹೊಂದುವಂತಿಲ್ಲ. ಒಬ್ಬ ವ್ಯಕ್ತಿಯ ತೆರಿಗೆ ಅಸ್ತಿತ್ವ ಹಾಗೂ ಅವನ ಎಲ್ಲ ಹಣಕಾಸು ವಹಿವಾಟುಗಳನ್ನು ಗುರುತಿಸಲು ಪ್ಯಾನ್ ಕಾರ್ಡ್ ಅತ್ಯಗತ್ಯ. ಜುಲೈ 27ರ ವರೆಗೆ 11.44 ಲಕ್ಷನಕಲಿ ಪ್ಯಾನ್‍ಕಾರ್ಡ್‍ಗಳನ್ನು ಪತ್ತೆ ಹಚ್ಚಲಾಗಿದೆ, ಅವುಗಳಲ್ಲಿ ಅಸ್ತಿತ್ವದಲ್ಲಿದ್ದ ವ್ಯಕ್ತಿ ಅಥವಾ ತಪ್ಪು ಗುರುತಿನ ವ್ಯಕ್ತಿಗಳ ಹೆಸರು ಇವೆ. ನಿಮ್ಮ ಪ್ಯಾನ್ ಕಾರ್ಡ್‍ಸಕ್ರಿಯವಾಗಿದೆಯೇ ಅಥವಾ ನಿಷ್ಕ್ರಿಯವಾಗಿದೆಯೇ ಎಂಬುದನ್ನು ಆದಾಯ ತೆರಿಗೆ ಇಲಾಖೆಯ ವೆಬ್‍ಸೈಟ್‍ಗೆ ಭೇಟಿ ನೀಡಿ ಪರಿಶೀಲಿಸಬಹುದು.

ನಿಮ್ಮ ಪ್ಯಾನ್‍ಕಾರ್ಡ್ ಮಾಹಿತಿಗಳನ್ನು ಚೆಕ್ ಮಾಡುವುದು ಹೇಗೆ?

ಈ ಲಿಂಕ್ ಕ್ಲಿಕ್ ಮಾಡಿ. ಮುಖಪುಟದಲ್ಲಿ Know Your PAN ಎಂಬ ಆಯ್ಕೆ ಕ್ಲಿಕ್ ಮಾಡಿ. ಹೊಸ ಪುಟವೊಂದು ತೆರೆದು ಕೊಳ್ಳುತ್ತದೆ. ಅಲ್ಲಿ ನಿಮ್ಮ ಮಾಹಿತಿಯನ್ನು ಭರ್ತಿ ಮಾಡಿ Submit ಬಟನ್ ಒತ್ತಿ. ನಿಮ್ಮ ಮೊಬೈಲ್‍ಗೆ OTP ಪಾಸ್‍ವರ್ಡ್ ಬರುತ್ತದೆ. ಆ ಪಾಸ್‍ವರ್ಡ್‍ನ್ನು ನಮೂದಿಸಿ ನಂತರ Validate ಬಟನ್ ಒತ್ತಿ.

ಒಂದು ವೇಳೆ ನಿಮ್ಮ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ನೋಂದಣಿಯಾಗಿದ್ದರೆ, ಅಲ್ಲಿ ಹೊಸ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ. ನಿಮ್ಮ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ಹೊಸ ಪುಟ ತೆರೆದುಕೊಳ್ಳುವುದು. ಅಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯವಾಗಿರುವ ಬಗ್ಗೆ ಸಂದೇಶ ಕಾಣಿಸುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin