23 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಿದ್ದಾಳೆ ಈ ಪಾಕ್ ಸಹೋದರಿ..!

Modi-Raksha-Bandhan--01

ನವದೆಹಲಿ, ಆ.7-ಇವರ ಹೆಸರು ಖಮರ್ ಮೊಹಿಸಿನ್ ಶೇಖ್. ಪಾಕಿಸ್ತಾನ ಮೂಲದ ಮಹಿಳೆ. ಇವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾಕಿಸ್ತಾನಿ ರಾಖಿ ಸಹೋದರಿ ಎಂದೇ ಬಣ್ಣಿಸಲಾಗುತ್ತಿದೆ. ಕಾರಣ : ಇವರು ಕಳೆದ 23 ವರ್ಷಗಳಿಂದ ಪ್ರಧಾನಿಗೆ ತಪ್ಪದೇ ರಕ್ಷಾಬಂಧನ್ ಕಟ್ಟಿ ಗಮನಸೆಳೆದಿದ್ದಾರೆ.
ಶೇಖ್ ಮದುವೆಯಾದ ನಂತರ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿದ್ದಾರೆ. ತಮ್ಮ ಮತ್ತು ಪ್ರಧಾನಿ ನಡುವಣ ರಾಖಿ ಸಂಬಂಧವನ್ನು ಇವರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ನಾನು ಕಳೆದ 22-23 ವರ್ಷಗಳಿಂದ ಮೋದಿಜೀ ಅವರಿಗೆ ರಾಖಿ ಕಟ್ಟುತ್ತಿದ್ದೇನೆ. ಈ ಬಾರಿಯೂ ಅದು ಪುನರಾವರ್ತನೆಯಾಗಿದೆ. ಕೆಲವು ದಿನಗಳ ಹಿಂದೆ ಮೋದಿ ಅವರು ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು ಎಂದು ಹೇಳುವಾಗ ಅವರ ಭಾತೃಪ್ರೇಮದ ಖುಷಿ ಅವರಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು.

ಅಚ್ಚರಿಯ ಸಂಗತಿ ಎಂದರೆ ಮೋದಿ ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದಾಗಿನಿಂದಲೂ ಶೇಖ್ ರಕ್ಷಾಬಂಧನ್ ಕಟ್ಟಿ ಶುಭ ಕೋರುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತರಾಗಿದ್ದ ಅವರು ಅಪಾರ ಶ್ರಮ, ಜನಸೇವೆ ಮೂಲಕ ದೇಶದ ಅತ್ಯುನ್ನತ ಪದವಿಗೆ ಏರಿದ್ದಾರೆ ಎಂದು ಪಾಕ್ ಮೂಲದ ಈ ಮಹಿಳೆ ಪ್ರಶಂಸಿಸಿದ್ದಾರೆ. ಪ್ರದಾನಿ ನರೇಂದ್ರ ಮೋದಿ ಟ್ವೀಟರ್‍ನಲ್ಲಿ ದೇಶದ ಎಲ್ಲ ವನಿತೆಯರಿಗೂ ರಕ್ಷಾಬಂಧನ್ ಶುಭ ಕೋರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin