ಕಾಶ್ಮೀರದ ಬಾರಾಮುಲ್ಲಾದಲ್ಲಿಮೂವರು ಉಗ್ರರ ಸೆರೆ : ಅಪಾರ ಶಸ್ತ್ರಾಸ್ತ್ರ ವಶ

Arrested-Man

ಜಮ್ಮು, ಆ.8- ಮಹತ್ವದ ಕಾರ್ಯಾಚರಣೆ ಯೊಂದರಲ್ಲಿ ಭದ್ರತಾಪಡೆಗಳು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಪಾಕಿಸ್ತಾನದ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್(ಎಚ್‍ಎಂ) ಉಗ್ರಗಾಮಿ ಸಂಘಟನೆಯ ಮೂವರು ಭಯೋತ್ಪಾದಕರನ್ನು ಬಂಧಿಸಿವೆ.  ಸೆರೆಯಾದ ಉಗ್ರರಿಂದ ಚೀನಾ ತಯಾರಿಕೆಯ ಪಿಸ್ತೂಲ್‍ಗಳೂ ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು, 29 ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‍ಪಿಎಫ್ ಯೋಧರು ಬಾರಾಮುಲ್ಲಾ ವಲಯದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಎಚ್‍ಎಂ ಉಗ್ರರನ್ನು ಬಂಧಿಸಿದರು.  ಪ್ರತ್ಯೇಕ ಕಾಶ್ಮೀರಕ್ಕಾಗಿ ಜಿಹಾದ್ (ಧರ್ಮಯುದ್ಧ) ಹೋರಾಟಕ್ಕೆ ಕೈಜೋಡಿಸಲು ಯುವಕರಿಗೆ ಪ್ರಚೋದನೆ ನೀಡುವ ಜೊತೆಗೆ ವಿಧ್ವಂಸಕ ಕೃತ್ಯಗಳಿಗೆ ಕುಮ್ಮಕ್ಕು ನೀಡುವುದು ಇವರ ಉದ್ದೇಶವಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

Facebook Comments

Sri Raghav

Admin