ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ಶಂಕೆ, ಕಾಂಗ್ರೆಸ್ ಗೆ ಆತಂಕ

Gujarat--v01

ನವದೆಹಲಿ, ಆ.8- ಕದನ ಕೌತುಕ ಕೆರಳಿಸಿರುವ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವಾಗಲೇ ಸೋಲು-ಗೆಲುವಿನ ಲೆಕ್ಕಾಚಾರದ ಮೇಲಾಟ ಮುಂದುವರಿದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್, ತಾವು ಗೆಲ್ಲುವ ಭರವಸೆ ಹೊಂದಿದ್ದರೂ 44 ಶಾಸಕರಲ್ಲಿ ಕೆಲವರು ಅಡ್ಡ ಮತದಾನ ಮಾಡಿರುವ ಶಂಕೆ ಇದ್ದು, ಕೈ ಪಾಳಯದಲ್ಲಿ ತೀವ್ರ ಆತಂಕ ಉಂಟಾಗಿದೆ. ಅಹಮ್ಮದ್ ಪಟೇಲ್ ಗೆಲ್ಲಲು ಕನಿಷ್ಟ 45 ಮತಗಳ ಅಗತ್ಯವಿದೆ. ಕಾಂಗ್ರೆಸ್ 44 ಸದಸ್ಯಬಲ ಹೊಂದಿದ್ದು, 1 ಮತದ ಕೊರತೆ ಇದೆ. ಈ ಸನ್ನಿವೇಶದಲ್ಲೇ ಕನಿಷ್ಟ ಒಬ್ಬರಿಗಿಂತ ಹೆಚ್ಚು ಶಾಸಕರು ಅಡ್ಡ ಮತದಾನ ಮಾಡಿರುವ ಶಂಕೆಯಿದ್ದು, ಅಹಮ್ಮದ್ ಪಟೇಲ್ ಗೆಲುವು ಡೋಲಾಯಮಾನ ಸ್ಥಿತಿಯಲ್ಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.

ಅಡ್ಡಮತದಾನವಾಗಿದ್ದರೆ ಇನ್ನೊಂದೆಡೆ ನಾಲ್ಕನೆ ಅಭ್ಯರ್ಥಿ ಬಿಜೆಪಿಯ ಬಲವಂತ್ ಸಿನ್ಹ ರಜಪೂತ್ ಕೂಡ ಗೆಲುವಿನ ವಿಶ್ವಾಸ ವ್ಯಕ್ತ ಪಡಿಸುತ್ತಿದ್ದಾರೆ. ಇದರ ನಡುವೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್‍ನ ಅಹಮದ್ ಪಟೇಲ್ ಪರವಾಗಿ ಜೆಡಿಯುನ ಶಾಸಕ ಚೋಟು ಬಾಯ್ ವಾಸ್ವ ಹಾಗೂ ಎನ್‍ಸಿಪಿಯ ಜಯಂತ್ ಪಟೇಲ್ ಬೋಸ್ಕಿ ಮತ ಚಲಾಯಿಸಿದ್ದಾರೆ. ಹೀಗಾಗಿ ಒಟ್ಟು 45 ಮತಗಳು ಅವರಿಗೆ ದೊರೆತಿದೆ ಎಂದು ಹೇಳಲಾಗುತ್ತಿದೆ. ಪ್ರತಿಷ್ಠೆಯ ಹೋರಾಟ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin