ನೈಸ್ ರಸ್ತೆಯಲ್ಲಿ ಸೈಕೋಪಾತ್ ಪ್ರತ್ಯಕ್ಷ..!

Psychopath

ಬೆಂಗಳೂರು, ಆ.8- ಬನ್ನೇರುಘಟ್ಟ ಬಳಿಯ ನೈಸ್ ರಸ್ತೆಯಲ್ಲಿ ಸೈಕೋಪಾತ್ ಪ್ರತ್ಯಕ್ಷನಾಗಿದ್ದು, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆ.6ರಂದು ರಾಜಶ್ರೀ ಎಂಬುವರು ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಇವರ ಬೈಕ್ ಕೈಕೊಟ್ಟಿದ್ದರಿಂದ ಮೆಕಾನಿಕ್‍ನನ್ನು ಕರೆದುಕೊಂಡು ಬರಲು ಪತಿ ಹೋಗಿದ್ದಾಗ ಇವರು ರಸ್ತೆ ಬದಿ ನಿಂತಿದ್ದರು.

ಈ ವೇಳೆ ಮಹಿಳೆಯರಂತೆ ಮೇಕಪ್ ಮಾಡಿಕೊಂಡು ಬಂದ ಸೈಕೋ ರಾಜಶ್ರೀ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ರಾಜಶ್ರೀ ಅವರು ಸಹಾಯಕ್ಕಾಗಿ ಈ ಮಾರ್ಗದಲ್ಲಿ ಹೋಗುತ್ತಿದ್ದ ವಾಹನಗಳ ಸವಾರರನ್ನು ಅಂಗಲಾಚಿದರೂ ಯಾರೊಬ್ಬರೂ ಬಾರದಿರುವುದು ವಿಷಾದಕರ. ಈ ಸಂಬಂಧ ರಾಜಶ್ರೀ ಅವರು ಬೆಂಗಳೂರು ನಗರ ಪೊಲೀಸರಿಗೆ ಘಟನೆ ವಿವರವನ್ನು ಪೋಸ್ಟ್  ಮಾಡಿರುವುದಲ್ಲದೆ, ಫೇಸ್‍ಬುಕ್‍ನಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಮುಖಕ್ಕೆ ಪೌಡರ್ ಹಚ್ಚಿಕೊಂಡು ಹಣೆಬೊಟ್ಟು ಇಟ್ಟು ಲಿಪ್‍ಸ್ಟಿಕ್ ಹಚ್ಚಿಕೊಂಡಿದ್ದನಲ್ಲದೆ, ಮಹಿಳೆಯರ ಉಡುಪನ್ನು ಸಹ ಧರಿಸಿದ್ದ ಸೈಕೋಪಾತ್ ನೈಸ್ ರಸ್ತೆಯಲ್ಲಿ ಹೋಗುವವರೊಂದಿಗೆ ಅಸಭ್ಯವಾಗಿ ವರ್ತಿಸಿರುವುದರ ಬಗ್ಗೆ ಪೊಲೀಸರಿಗೆ ಪೋಸ್ಟ್  ಮಾಡಿದ್ದಾರೆ.

Facebook Comments

Sri Raghav

Admin