ರಾಜೀವ್ ಸದ್ಭಾವನ ಜ್ಯೋತಿ ಯಾತ್ರೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Rajeev-Gandhi-01

ಬೆಂಗಳೂರು, ಆ.8-ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಸ್ಮರಣಾರ್ಥ ನಡೆಯಲಿರುವ 26ನೇ ರಾಜೀವ್ ಜ್ಯೋತಿ ಸದ್ಭಾವನ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿಂದು ಚಾಲನೆ ನೀಡಿದರು. ನಂತರ ಕೆಪಿಸಿಸಿ ಕಚೇರಿ ಎದುರು ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ್ ರಾಜೀವ್‍ಗಾಂಧಿ ಯಾತ್ರೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಾತ್ರೆಯ ನೇತೃತ್ವ ವಹಿಸಿರುವ ಎಸ್.ಎಸ್.ಪ್ರಕಾಶಂ ಅವರು ತಮಿಳುನಾಡಿನ ಶ್ರೀ ಪೆರಂಬದೂರು ಮೂಲಕ ಯಾತ್ರೆ ಆರಂಭವಾಗಲಿದೆ. ವಿಜಯವಾಡ, ಕೋಲ್ಕತ್ತಾ, ವಾರಣಾಸಿ, ಅಲಹಾಬಾದ್, ಅಮೇಥಿ ರಾಯ್, ಬರೇಲಿ, ಲಕ್ನೋ, ಫರೀದಾಬಾದ್ ಮೂಲಕ ನವದೆಹಲಿಗೆ ತೆರಳಿದೆ.20 ರಂದು ನವದೆಹಲಿಯ ರಾಜೀವ್‍ಗಾಂಧಿಯವರ ವೀರಭೂಮಿಯಲ್ಲಿ ಮುಕ್ತಾಯಗೊಳ್ಳಲಿದೆ.  ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‍ಗಾಂಧಿ ಯಾತ್ರೆ ಸ್ವಾಗತಿಸುತ್ತಾರೆ ಎಂದರು.

Facebook Comments

Sri Raghav

Admin