ಸಚಿನ್ ಮಿಗಾ ಅರ್ಜಿ ಇತ್ಯರ್ಥ, ಕಂದಾಯ ಭೂಮಿ ತೆರವುಗೊಳಿಸದಂತೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

S-S.R.Hiremut

ಬೆಂಗಳೂರು, ಆ.8-ಬಾಲಸುಬ್ರಹ್ಮಣ್ಯಂ ವರದಿ ಆಧಾರಿತ ಒತ್ತುವರಿಯನ್ನು ತೆರವು ಮಾಡುವಂತೆ ಸಮಾಜ ಪರಿವರ್ತನಾ ಸಂಸ್ಥೆಯ ಮುಖಂಡ ಎಸ್.ಆರ್.ಹಿರೇಮಠ್ ಸಲ್ಲಿಸಿದ್ದ ಅರ್ಜಿ ಹಾಗೂ ರೈತರು, ಕೃಷಿ ಕಾರ್ಮಿಕರು ಮಾಡಿರುವ ಒತ್ತುವರಿಯನ್ನು ತೆರವು ಮಾಡದಂತೆ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಗೊಳಿಸಿರುವ ಹೈಕೋರ್ಟ್ ಟ್ರಿಬ್ಯುನಲ್ ಮುಂದೆ ದಾವೆ ಹೂಡಲು ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ದಿನೇಶ್‍ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅರ್ಜಿಯನ್ನು ಇತ್ಯರ್ಥಪಡಿಸಿದ್ದು, ಎಸ್.ಆರ್.ಹಿರೇಮಠ್ ಹಾಗೂ ಸಚಿನ್ ಮಿಗಾ ಅವರು ಲ್ಯಾಂಡ್ ಗ್ರಾಬಿಂಗ್ ಟ್ರಿಬ್ಯುನಲ್ ಮುಂದೆ ದಾವೆ ಹೂಡಲು ಆದೇಶಿಸಿದ್ದಾರೆ. ಈ ಹಿಂದೆ ನ್ಯಾಯಾಲಯ ಎಸ್.ಆರ್.ಹಿರೇಮಠ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಿ 11 ಲಕ್ಷ ಎಕರೆ ಒತ್ತುವರಿಯನ್ನು ಬಾಲಸುಬ್ರಹ್ಮಣ್ಯಂ ವರದಿಯಂತೆ ತೆರವುಗೊಳಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಚಿನ್ ಮಿಗಾ ಹಾಗೂ ಇತರರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತ ಅರ್ಜಿಯಲ್ಲಿ 11ಲಕ್ಷ ಎಕರೆ ಒತ್ತುವರಿಯಲ್ಲಿ 8 ಲಕ್ಷ ಎಕರೆ ಬಗರ್‍ಹುಕುಂ ಅರ್ಜಿಗಳಿವೆ.

ಒಂದು ಲಕ್ಷ ಕಳಸ ಇನಾಮ್ ಹಾಗೂ ಅರಣ್ಯ ಹಕ್ಕಿನಡಿ ಸಲ್ಲಿಸಿದ ಅರ್ಜಿಗಳಿವೆ. ಇದನ್ನು ತೆರವುಗೊಳಿಸಿದರೆ ಲಕ್ಷಾಂತರ ರೈತರಿಗೆ ತೊಂದರೆಯಾಗುತ್ತದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ ನಂತರ ಹೊಸ ಆದೇಶ ನೀಡಿ 3 ಎಕರೆ ಅರಣ್ಯ ಹಾಗೂ 5 ಎಕರೆ ಕಂದಾಯ ಭೂಮಿಯನ್ನು ತೆರವು ಮಾಡದಂತೆ ಹೈಕೋರ್ಟ್ ಆದೇಶ ನೀಡಿದೆ.

Facebook Comments

Sri Raghav

Admin