ಅಹಮದ್ ಪಟೇಲ್’ರನ್ನು ಸೋಲಿಸಲು ಬಿಜೆಪಿಯಿಂದ 20 ಕೋಟಿ ಆಮಿಷ : ಸಿದ್ದರಾಮಯ್ಯ

Siddaramaiah-01

ಬೆಂಗಳೂರು, ಆ.9- ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಹಮದ್ ಪಟೇಲ್ ಅವರನ್ನು ಸೋಲಿಸಲು ಬಿಜೆಪಿ, ಗುಜರಾತ್‍ನ ಕಾಂಗ್ರೆಸ್ ಶಾಸಕರಿಗೆ 15 ರಿಂದ 20 ಕೋಟಿ ರೂ. ನೀಡುವ ಆಮಿಷ ಒಡ್ಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಡೆಸಿದ ಕಸರತ್ತು ಯಶಸ್ವಿಯಾಗಲಿಲ್ಲ. ಕಾಂಗ್ರೆಸ್ ಶಾಸಕರು ಯಾವುದೇ ಆಮಿಷಗಳಿಗೆ ಒಳಗಾಗದೆ ಪಟೇಲ್ ಅವರಿಗೆ ಮತ ಹಾಕಿ ಗೆಲ್ಲಿಸಿದ್ದಾರೆ ಎಂದರು.

ಅಹಮದ್ ಪಟೇಲ್ ಅವರನ್ನು ಗೆಲ್ಲಿಸಿದ ಶಾಸಕರಿಗೆ ಅಭಿನಂದನೆ ಎಂದು ಸಿಎಂ ಹೇಳಿದರು. ಬಿಜೆಪಿಯ ಕುತಂತ್ರಗಳು ವಿಫಲವಾಗಿವೆ. ಕಾಂಗ್ರೆಸ್ ಜಯಗಳಿಸಿದೆ. ತಡರಾತ್ರಿವರೆಗೂ ಬಿಜೆಪಿ ಮಾಡಿದ ನಾನಾ ರೀತಿಯ ಸಂಚುಗಳು ಫಲ ನೀಡಲಿಲ್ಲ ಎಂದು ಲೇವಡಿ ಮಾಡಿದರು.

Facebook Comments

Sri Raghav

Admin