ಇನೋವಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಮಹಿಳೆ ಸಾವು

Kolar--01

ಕೋಲಾರ,ಆ.9- ಅತಿವೇಗವಾಗಿ ಮುನ್ನುಗ್ಗಿದ ಇನ್ನೋವಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೆಂಗಳೂರು ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.  ಬೇತಮಂಗಲದಿಂದ ರಾತ್ರಿ 11 ಗಂಟೆ ಸುಮಾರಿಗೆ ಇನ್ನೋವಾ ಕಾರು ರಾಮಮೂರ್ತಿನಗರಕ್ಕೆ ಹೋಗುತ್ತಿದ್ದಾಗ ಕೋಲಾರದ ಕಡೆ ಹೋಗುತ್ತಿದ್ದ ಇನೋವಾ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೆಂಗಳೂರಿನ ರಾಮಮೂರ್ತಿನಗರದ ನಿವಾಸಿ ರೂಪಾ ಎಂಬುವರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಕೋಲಾರದ 27ನೇ ವಾರ್ಡ್ ಸದಸ್ಯೆ ಸಾಕಮ್ಮ ಮತ್ತು ಪ್ರಭಾಕರ್ ಎಂಬುವರು ಗಾಯಗೊಂಡಿದ್ದು , ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin