ಇರಾನ್ ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ 27 ಐಎಸ್ ಉಗ್ರರ ಬಂಧನ

ISIS--01

ಟೆಹರಾನ್, ಆ.9-ಇರಾನ್‍ನ ಧಾರ್ಮಿಕ ನಗರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಒಳಸಂಚು ರೂಪಿಸಿದ್ದ ಆರೋಪದ ಮೇಲೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿ ಸಂಘಟನೆಯ 27 ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಗುಪ್ತಚರ ಸಚಿವಾಲಯ ತಿಳಿಸಿದೆ. ಗುಪ್ತಚರ ಮಾಹಿತಿಗಳ ವಿನಿಮಯದ ವೇಳೆ ಈ ಭಯೋತ್ಪಾದಕರನ್ನು ಗುರುತಿಸಲಾಗಿದೆ ಎಂದು ಸಚಿವಾಲಯ ತನ್ನ ವೆಬ್‍ಸೈಟ್‍ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ. ಇರಾನ್ ಅಧ್ಯಕ್ಷರಾಗಿ ರೂಹಾನಿ ಎರಡನೇ ಬಾರಿ ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನವೇ ಇರಾನ್‍ನಲ್ಲಿ ಐಎಸ್ ಉಗ್ರರ ಕಾರ್ಯಾಚರಣೆ ತೀವ್ರಗೊಂಡಿದೆ.

Facebook Comments

Sri Raghav

Admin