ಒತ್ತಡದಿಂದ ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ 100 ಯೋಧರು…!

Indian-Army--01

ನವದೆಹಲಿ, ಆ.9-ಹದಿನೈದು ಲಕ್ಷಕ್ಕೂ ಹೆಚ್ಚು ಯೋಧರನ್ನು ಹೊಂದಿರುವ ಭಾರತೀಯ ಸೇನೆಯನ್ನು ಒತ್ತಡ ಎಂಬ ಭೂತ ಕೊಲ್ಲುವುದನ್ನು ಮುಂದುವರಿದಿದೆ. ಪ್ರತಿವರ್ಷ 100ಕ್ಕೂ ಹೆಚ್ಚು ಯೋಧರು ಒತ್ತಡದ ಸಮಸ್ಯೆಗಳಿಂದಾಗಿ ಮೃತಪಟ್ಟಿದ್ದಾರೆ. ಒತ್ತಡದಿಂದ ಯೋಧರು ಆತ್ಮಹತ್ಯೆ ಮಾಡಿಕೊಳ್ಳುವ ಇಲ್ಲವೇ ತನ್ನ ಸಹೋದ್ಯೋಗಿ ಅಥವಾ ಮೇಲಧಿಕಾರಿಯನ್ನು ಹತ್ಯೆ ಮಾಡುತ್ತಿರುವ ಪ್ರಕರಣಗಳು ಸೇನಾಪಡೆಯಲ್ಲಿ ಮುಂದುವರಿದಿರುವುದು ಆತಂಕಕಾರಿ ಸಂಗತಿಯಾಗಿದೆ.

ಈ ವರ್ಷದಲ್ಲಿ ಇಲ್ಲಿಯವರೆಗೆ ಸೇನೆಯಲ್ಲಿ ಆತ್ಮಹತ್ಯೆ ಮತ್ತು ಸಹೋದ್ಯೋಗಿ ಹತ್ಯೆ ಪ್ರಕರಣಗಳಿಂದಾಗಿ 44 ಯೋಧರು ಮೃತಪಟ್ಟಿದ್ದಾರೆ. 2014ರಿಂದ ಇಲ್ಲಿಯವರೆಗೆ 9 ಉನ್ನತಾಧಿಕಾರಿಗಳು ಹಾಘೂ 19 ಕಿರಿಯ ಅಧಿಕಾರಿಗಳೂ ಸೇರಿದಂತೆ 319 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಇದೇ ಅವಧಿಯಲ್ಲಿ 11 ಯೋಧರನ್ನು ಸಹೋದ್ಯೋಗಿಗಳೇ ಕೊಂದಿದ್ದಾರೆ ಎಂದು ರಕ್ಷಣಾ ಸಚಿವಾಲಯವು ಸಂಸತ್ತಿಗೆ ಮಾಹಿತಿ ನೀಡಿದೆ.

Facebook Comments

Sri Raghav

Admin