ಕಾಶ್ಮೀರ-ಉ.ಪ್ರದೇಶದಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ 14 ಮಂದಿ ಸಾವು

Accident--01

ಜಮ್ಮು/ಲಕ್ನೋ, ಆ.9-ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಪ್ರದೇಶದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ 14 ಮಂದಿ ಮೃತಪಟ್ಟು, ಕೆಲವರು ಗಾಯಗೊಂಡಿದ್ದಾರೆ.  ಕಾಶ್ಮೀರದ ರಿಯಾಸಿ ಜಿಲ್ಲೆಯ ಚೇಚಿ ನಲ್ಲಾ ಪ್ರದೇಶದಲ್ಲಿ ಇಂದು ಮುಂಜಾನೆ ಟೆಂಪೋ 200 ಅಡಿ ಕಂದಕಕ್ಕೆ ಉರುಳಿ ಬಿದ್ದು 9 ಪ್ರಯಾಣಿಕರು ಮೃತಪಟ್ಟು, 6 ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಾಹಿ ಸಾಜಿದ್ ಭಟ್ ತಿಳಿಸಿದ್ದಾರೆ.

ಉತ್ತರಪ್ರದೇಶದ ಲಖೀಂಪುರ್ ಖೇರಿಯ ಮಹಮದಿ-ಶಹಜಾನ್‍ಪುರ್ ರಸ್ತೆಯ ಶಂಕರ್‍ಪುರ್ ಕ್ರಾಸಿಂಗ್ ಬಳಿ ನಿನ್ನೆ ತಡರಾತ್ರಿ ಟ್ರಕ್ ಮತ್ತು ಕಾರು ನಡುವೆ ಡಿಕ್ಕಿಯಾಗಿ ಮಹಿಳೆ ಮತ್ತು ಮಗು ಸೇರಿ ಐವರು ಮೃತಪಟ್ಟು, ಇನ್ನಿಬರು ತೀವ್ರ ಗಾಯಗೊಂಡಿದ್ದಾರೆ.

Facebook Comments

Sri Raghav

Admin