ಕೃಷಿ ಹೊಂಡಕ್ಕೆ ಹಾರಿ ಮಗಳ ಜೊತೆ ತಾಯಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Suicide--01

ಕೋಲಾರ,ಆ.9-ಜೀವನದಲ್ಲಿ ಜಿಗುಪ್ಸೆಗೊಂಡ ತಾಯಿ ತನ್ನ ಮೂರು ವರ್ಷದ ಮಗುವನ್ನು ಕೃಷಿ ಹೊಂಡಕ್ಕೆ ತಳ್ಳಿ ಆಕೆಯೂ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.ಕೋಲಾರ ತಾಲ್ಲೂಕಿನ ಬೆಳ್ಳಂಬುರಿ ಗ್ರಾಮದ ಜ್ಯೋತಿ(29) ಮತ್ತು ಕೃತಿ(3) ಸಾವನ್ನಪ್ಪಿದ್ದಾರೆ. ಬೆಂಗಳೂರು ಮೂಲದ ಆನಂದ್ ಎಂಬಾತನನ್ನು ಜ್ಯೋತಿ ಮದುವೆಯಾಗಿದ್ದು , ಇತ್ತೀಚೆಗೆ ಗಂಡನಿಂದ ದೂರವಾಗಿ ಮಗಳೊಂದಿಗೆ ಬೆಳ್ಳಂಬುರಿ ಗ್ರಾಮದಲ್ಲಿ ವಾಸವಾಗಿದ್ದರು. ಜೀವನ ನಿರ್ವಹಣೆಗೆ ಪತಿಯಿಂದ ಯಾವುದೇ ರೀತಿಯ ನೆರವು ಸಿಗದ ಕಾರಣ ಜೀವನದಲ್ಲಿ ನೊಂದಿದ್ದರು ಎನ್ನಲಾಗಿದೆ.

ಇಂದು ಮುಂಜಾನೆ ಮಗಳನ್ನು ಕರೆದುಕೊಂಡು ಮುನಿಸ್ವಾಮಿ ಎಂಬುವರಿಗೆ ಸೇರಿದ ಕೃಷಿ ಹೊಂಡದ ಬಳಿ ಹೋಗಿ ಮಗಳನ್ನು ತಳ್ಳಿ ಆಕೆಯೂ ಸಹ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಸುದ್ದಿ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಎರಡೂ ಶವಗಳನ್ನು ಮೇಲೆತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin