ಚೀನಾದಲ್ಲಿ ಭಾರೀ ಭೂಕಂಪ : 20ಕ್ಕೂ ಹೆಚ್ಚು ಮಂದಿ ಸಾವು, ಅನೇಕರು ನಾಪತ್ತೆ

China--01

ಶಾಂಘೈ, ಆ.9-ಚೀನಾದ ಪರ್ವತಮಯ ಸಿಚುಆನ್ ಪ್ರಾಂತ್ಯದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಕ್ಕೆ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 168 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಭೂಕಂಪದ ನಂತರ ಭೂಕುಸಿತದಿಂದಾಗಿ ಸುಮಾರು 100 ಪ್ರವಾಸಿಗರು ಅಪಾಯಕ್ಕೆ ಸಿಲುಕಿದ್ದಾರೆ. ಕೆಲವು ಕಟ್ಟಡಗಳು ಕುಸಿದು ಬಿದ್ದಿದ್ದು ಅವುಗಳ ಅಡಿ ಸಿಲುಕಿರುವವರ ರಕ್ಷಣೆ ಕಾರ್ಯ ಮುಂದುವರಿದಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 7ರಷ್ಟು ದಾಖಲಾಗಿತ್ತು. ಭೂಕಂಪ ಮತ್ತು ಭೂಕುಸಿತದಿಂದ ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

China--03

ಗೌಂಗ್‍ಯೌನ್ ನಗರದಿಂದ 200 ಕಿ.ಮೀ. ದೂರದ ಪ್ರದೇಶದಲ್ಲಿ ನಿನ್ನೆ ರಾತ್ರಿ ತೀವ್ರ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂಗರ್ಭ ಸರ್ವೇಕ್ಷಣಾ ಇಲಾಖೆ ತಿಳಿಸಿದೆ. ಪ್ರಸಿದ್ಧ ಪ್ರವಾಸಿ ತಾಣವಾದ ಜಿಯುಝೈಗೌ ನಿಸರ್ಗ ಧಾಮಕ್ಕೆ ಸನಿಹದಲ್ಲೇ ಈ ಭೂಕಂಪ ಸಂಭವಿಸಿದೆ.  ಭೂಕಂಪ ಮತ್ತು ಭೂಕುಸಿತ ಸಂಭವಿಸಿದ ನಂತರ ಸುಮಾರು 31,500 ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಸಿ ತಾಣದಲ್ಲಿದ್ದ ಹೋಟೆಲ್ ಒಂದು ಕುಸಿದು ಅದರಡಿ ಕೆಲವು ಪ್ರವಾಸಿಗರು ಸಿಲುಕಿದ್ದಾರೆ. ಅವರ ರಕ್ಷಣೆ ಕಾರ್ಯ ಮುಂದುವರಿದಿದೆ. ಇದೇ ಕಟ್ಟಡದಿಂದ 2,800 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆಎ ಂದು ಅವರು ಹೇಳಿದರು.

China--02

Facebook Comments

Sri Raghav

Admin