ಚುನಾವಣಾ ಆಯೋಗಕ್ಕೆ ಸೋನಿಯಾ ಗಾಂಧಿ ಕೃತಜ್ಞತೆ

ಈ ಸುದ್ದಿಯನ್ನು ಶೇರ್ ಮಾಡಿ

Sonia-Gandhi--001

ನವದೆಹಲಿ, ಆ.9-ನಾಟಕೀಯ ಬೆಳವಣಿಗೆಗಳ ನಡುವೆ ನಡುರಾತ್ರಿ ನಂತರ ರಾಜ್ಯಸಭಾ ಚುನಾವಣೆ ಮತ ಎಣಿಕೆಯಲ್ಲಿ ವಿಜೇತರಾದ ತಮ್ಮ ಪರಮಾಪ್ತ ಅಹ್ಮದ್ ಪಟೇಲ್‍ಗೆ ಅಭಿನಂದನೆ ಸಲ್ಲಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಚುನಾವಣಾ ಆಯೋಗಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ.   ಕಾಂಗ್ರೆಸ್‍ನ ಇಬ್ಬರು ಬಂಡಾಯ ಶಾಸಕರ ಮತಗಳನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಿದ ನಂತರ ನಡೆದ ಅಚ್ಚರಿ ಫಲಿತಾಂಶದಲ್ಲಿ ಪಟೇಲ್ ಗೆಲುವು ಸಾಧಿಸಿದರು.

ಚುನಾವಣಾ ಫಲಿತಾಂಶಕ್ಕೂ ಮುನ್ನ ತುಂಬಾ ಒತ್ತಡವಿತ್ತು ಎಂಬುದನ್ನು ಒಪ್ಪಿಕೊಂಡ ಸೋನಿಯಾ, ಪಟೇಲ್ ಗೆಲುವಿನಿಂದ ನಿರಾಳವಾಗಿದೆ ಮತ್ತು ನನಗೆ ಸಂತಸವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Facebook Comments

Sri Raghav

Admin