ತೆಂಗಿನಕಾಯಿ ರುಬ್ಬುವಾಗ ಗ್ರೈಂಡರ್‍ಗೆ ಸಿಲುಕಿ ಮಹಿಳೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು, ಆ.9- ತೆಂಗಿನಕಾಯಿ ರುಬ್ಬುತ್ತಿದ್ದ ವೇಳೆ ಸೀರೆಯ ಸೆರಗು ಗ್ರೈಂಡರ್‍ಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಂಬಳಬೆಟ್ಟು ಕೊಳಂಬೆಯಲ್ಲಿ ನಡೆದಿದೆ. ವಿಟ್ಲದ ಕಂಬಳಬೆಟ್ಟು ನಿವಾಸಿ ಅಲಿಮಮ್ಮ (45) ಮೃತಪಟ್ಟ ಮಹಿಳೆಯಾಗಿದ್ದು, ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗ್ರೈಂಡರ್‍ನಲ್ಲಿ ತೆಂಗಿನಕಾಯಿ ರುಬ್ಬುತ್ತಿದ್ದರು.

ಈ ವೇಳೆ ಆಕಸ್ಮಿಕವಾಗಿ ಸೀರೆಯ ಸೆರಗು ಗ್ರೈಂಡರ್‍ಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ಗಮನಿಸಿದ ಪಕ್ಕದ ಮನೆಯವರು ಕೂಡಲೇ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ.

Facebook Comments

Sri Raghav

Admin