ಪುರೋಹಿತರಿಗೆ ಅಪಮಾನ : ಟಿವಿ ಚಾನಲ್ ವಿರುದ್ಧ ಬ್ರಾಹ್ಮಣರ ಆಕ್ರೋಶ

Brahamana--01

ಬೆಂಗಳೂರು,ಆ.9- ಮನರಂಜನೆಯ ನೆಪದಲ್ಲಿ ಬ್ರಾಹ್ಮಣರನ್ನು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಬಿಂಬಿಸಿ ಅವಮಾನಿಸಲಾಗುತ್ತಿದೆ ಎಂದು ಖಂಡಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಂಗಸಂಸ್ಥೆಯಾಗಿರುವ ಕಂಗೇರಿ ಉಪನಗರದ ಬ್ರಾಹ್ಮಣ ಸಭಾ, ಕಾರ್ಯಕ್ರಮ ಆಯೋಜಿಸಿದ್ದ ಝೀ ಟಿ ವಾಹಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.  ಝೀ ಟಿವಿ ವಾಹಿನಿಯಲ್ಲಿ ಇತ್ತೀಚೆಗೆ ಬಿತ್ತರಿಸಲಾದ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಬ್ರಾಹ್ಮಣರು ಮತ್ತು ಪುರೋಹಿತರನ್ನು ಅಪಮಾನಕರವಾಗಿ ಬಿಂಬಿಸಿ ತೋರಿಸಿರುವುದು ಖಂಡನಾರ್ಹವಾಗಿದೆ.

ಆಗಿರುವ ತಪ್ಪಿಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಸಭಾದ ಅಧ್ಯಕ್ಷ ಹೆಚ್.ಎಸ್.ಸುಧೀಂದ್ರರಾವ್ ಝೀ ಟಿವಿ ಮುಖ್ಯಸ್ಥರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಪುನಾವರ್ತನೆಯಾದರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin