ಮಂತ್ರಾಲಯದಲ್ಲಿ ರಾಯರ ಆರಾಧನೆಗೆ ಹರಿದುಬಂದ ಭಕ್ತಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

Mantralayam--01

ರಾಯಚೂರು,ಆ.9-ನಿನ್ನೆ ಮಂತ್ರಾಲಯದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 346 ನೇ ಆರಾಧನಾ ಮಹೋತ್ಸವ ಸಂಭ್ರಮ, ಸಡಗರದ ಮಧ್ಯೆ ಆರಂಭಗೊಂಡಿತು.  ಶ್ರೀ ಮಠದಲ್ಲಿ ಆರಾಧನೆಯ ಮೊದಲ ದಿನ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಕಂಡು ಬಂದರು. ಬೆಳಗ್ಗೆ 4ಕ್ಕೆ ಶ್ರೀ ಮಠದಲ್ಲಿ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಭಜನಾ ಮಂಡಳಿಗಳಿಂದ ಹರಿದಾಸರ ಕೃತಿಗಳ ಸಂಕೀರ್ತನೆಗಳು  ನಡೆದವು.

ಶ್ರೀ ಮಠದ ಪ್ರಾಕಾರದಲ್ಲಿ ಪ್ರಹ್ಲಾದರಾಜರ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಕರ್ನಾಟಕ ಉಪಲೋಕಯುಕ್ತ ನ್ಯಾ. ಸುಭಾಷï ಅಡಿ, ಹಿರಿಯ ಚಿತ್ರ ನಟ ಶಿವರಾಂ ಸೇರಿ ಹಲವು ಪ್ರಮುಖರು ಪಾಲ್ಗೊಂಡಿದ್ದರು.

Facebook Comments

Sri Raghav

Admin