ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಶ್ರೀಶಾಂತ್ ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

Shreeshant--01

ನವದೆಹಲಿ, ಆ.9- ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಸುಳಿಗೆ ಸಿಲುಕಿದ್ದ ಕೇರಳದ ವೇಗದ ಬೌಲರ್ ಶ್ರೀಶಾಂತ್ ಅವರು ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಮುಂಬರುವ ವಿಶ್ವಕಪ್‍ನ ವೇಳೆಗೆ ಟೀಂ ಇಂಡಿಯಾದಲ್ಲಿ ಖಾಯಂ ಆಟಗಾರನಾಗಿ ಗುರುತಿಸಿಕೊಳ್ಳಲು ಚಿಂತಿಸುತ್ತಿರುವ ಶ್ರೀಶಾಂತ್ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾದ ಸರಣಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್‍ಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಶ್ರೀಶಾಂತ್‍ಗೆ ಕ್ಲೀನ್ ಚಿಟ್ ನೀಡಿರುವುದರಿಂದ ಆದಷ್ಟು ಬೇಗ ಟೀಂ ಇಂಡಿಯಾವನ್ನು ಸೇರಿಕೊಂಡು ಮತ್ತೆ ತಮ್ಮ ಬೌಲಿಂಗ್ ಮೊನಚನ್ನು ಪ್ರದರ್ಶನ ಮಾಡುತ್ತೇನೆ ಎಂದರು. ಪ್ರಥಮ ಟ್ವೆಂಟಿ-20 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಮಿಸ್ಬಾ ಉಲ್ ಹಕ್‍ರ ಕ್ಯಾಚ್ ಅನ್ನು ಪಡೆಯುವ ಮೂಲಕ ಧೋನಿ ಬಳಗ ಚೊಚ್ಚಲ ವಿಶ್ವಕಪ್ ಅನ್ನು ಗೆದ್ದುಕೊಳ್ಳುವಲ್ಲಿ ಶ್ರೀಶಾಂತ್ ಮಹತ್ತರ ಸಾಧನೆಯನ್ನು ಮಾಡಿದ್ದರು. ಈಗ ಮತ್ತೆ ಟೀಂ ಇಂಡಿಯಾವನ್ನು ಕೂಡಿಕೊಳ್ಳಲು ವೇಗದ ಬೌಲರ್ ಶ್ರೀಶಾಂತ್ ಈಗಾಗಲೇ ಸಾಕಷ್ಟು ತರಬೇತಿಯನ್ನು ಪಡೆದಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments

Sri Raghav

Admin