ಲಿಂಗಾಯತ ಸ್ವತಂತ್ರ ಧರ್ಮ ವಿಚಾರ ಕುರಿತು ನಾಳೆ ಸರ್ವಸಮ್ಮತ ನಿರ್ಣಯ

MB-Patil

ಬೆಂಗಳೂರು, ಆ.9- ಲಿಂಗಾಯತ ಸ್ವತಂತ್ರ ಧರ್ಮ ವಿಚಾರದ ಗೊಂದಲದ ಬಗ್ಗೆ ನಾಳೆ ಸರ್ವಸಮ್ಮತ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಧರ್ಮ ಸ್ವತಂತ್ರ ವಾಗಿದ್ದು, ಹಿಂದೂ ಧರ್ಮಕ್ಕಿಂತ ಭಿನ್ನವಾಗಿದೆ. ವೀರಶೈವರು ಲಿಂಗಾಯತ ಧರ್ಮದ ಒಂದು ಭಾಗ. ಲಿಂಗಾಯತ ಧರ್ಮದ 38 ಪಂಗಡಗಳಲ್ಲಿ ವೀರಶೈವ ಒಂದು ಉಪಜಾತಿಯಾಗಿದೆ ಎಂದರು.

ನಾಳೆ ಬೆಂಗಳೂರಿನಲ್ಲಿ ಲಿಂಗಾಯತರ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಚಿಂತಕರು ಸೇರಿ ಲಿಂಗಾಯತ ಧರ್ಮದ ಬಗ್ಗೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ವೀರಶೈವ ಹಾಗೂ ಲಿಂಗಾಯತರ ಬಗೆಗಿನ ಗೊಂದಲದ ವಿಚಾರಕ್ಕೆ ನಾಳೆ ತೆರೆ ಬೀಳಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

Facebook Comments

Sri Raghav

Admin