ಶಸ್ತ್ರಾಸ್ತ್ರ ಆಧುನೀಕರಣಕ್ಕೆ 20,000ಕೋಟಿ ನೀಡಲು ಕೇಂದ್ರಕ್ಕೆ ರಕ್ಷಣಾ ಸಚಿವಾಲಯ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Indian-Army

ನವದೆಹಲಿ, ಆ.9-ಪ್ರಸ್ತುತ ಚೀನಾ-ಭಾರತ ನಡುವಿನ ಡೋಕ್ಲಮ್ ಗಡಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳ ಆಧುನೀಕರಣ, ಸೇನಾ ಕಾರ್ಯಾಚರಣೇ ವೆಚ್ಚ ಸೇರಿದಂತೆ ಹೆಚ್ಚುವರಿಯಾಗಿ 20 ಸಾವಿರ ಕೋಟಿ ರೂ. ತುರ್ತು ಅಗತ್ಯವಿದ್ದು, ಆದಷ್ಟು ಶೀಘ್ರ ಮಂಜೂರು ಮಾಡುವಂತೆ ರಕ್ಷಣಾ ಸಚಿವಾಲಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಭೂಸೇನೆಯ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ಲಘು ಹೆಲಿಕಾಪ್ಟರ್, ಗನ್ಸ್, ರಾತ್ರಿ ವೇಳೆ ಕಾರ್ಯಾಚರಣೆಗೆ ಸಾಧನಗಳ ಕೊರತೆಯಿದ್ದು, ಅದನ್ನು ತುಂಬಬೇಕಿದೆ. ಅಲ್ಲದೆ, ಭಾರತೀಯ ವಾಯುಪಡೆ ಯುದ್ಧವಿಮಾನಗಳು, ಇಂಧನ ತುಂಬುವ ಸಮರ ವಿಮಾನಗಳು, ಡ್ರೋಣ್‍ಗಳು ಸೇರಿದಂತೆ ವಾಯುದಾಳಿಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಸಲಕರಣೆಗಳ ಕೊರತೆಯಿದ್ದು, ಹೆಚ್ಚುವರಿಯಾಗಿ ಈ ಹಣ ಮಂಜೂರಾತಿ ಮಾಡುವಂತೆ ಕೋರಿರುವುದಾಗಿ ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರ ತಿಳಿಸಿದ್ದಾರೆ.

Facebook Comments

Sri Raghav

Admin