ಅಕಾಲಿ ತಖ್ತ್ ಎಕ್ಸ್ಪ್ರೆಸ್ ರೈಲಿನ ಶೌಚಾಲಯದಲ್ಲಿ ಬಾಂಬ್ ಪತ್ತೆ..!?

Bomb  01

ಅಮೇಥಿ, ಆ.10-ದೇಶದ 70ನೇ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ವಿವಿಧೆಡೆ ಭಯೋತ್ಪಾದಕರಿಂದ ದಾಳಿ ನಡೆಯುವ ಸಾಧ್ಯತೆ ಆತಂಕದ ನಡುವೆಯೇ ಅಮೃತ್‍ಸರ್‍ಗೆ ತೆರಳುತ್ತಿದ್ದ ಅಕಾಲಿ ತಖ್ತ್ ಎಕ್ಸ್ಪ್ರೆಸ್ ರೈಲಿನಲ್ಲಿ ನಿನ್ನೆ ರಾತ್ರಿ ಶಂಕಿತ ವಸ್ತುವೊಂದು ಪತ್ತೆಯಾಗಿ ತೀವ್ರ ಆತಂಕಕ್ಕೆ ಕಾರಣವಾಯಿತು.
ಉತ್ತರ ಪ್ರದೇಶದ ಅಮೇಥಿ ರೈಲು ನಿಲ್ದಾಣದಲ್ಲಿ ಈ ಎಕ್ಸ್‍ಪ್ರೆಸ್ ಭೋಗಿಯೊಂದರ ಶೌಚಾಲಯದ ಒಳಗೆ ಪೋಟ್ಟಣದಲ್ಲಿ ಶಂಕಾಸ್ಪದ ವಸ್ತುವೊಂದು ಪತ್ತೆಯಾದ ನಂತರ ಸ್ಥಳಕ್ಕೆ ಬಾಂಬ್ ಮತ್ತು ಶ್ವಾನದಳವನ್ನು ಕರೆಸಿ ತಪಾಸಣೆ ನಡೆಸಲಾಯಿತು. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರೈಲಿನ ಎರಡು ಬೋಗಿಗಳನ್ನು ತೆರವುಗೊಳಿಸಲಾಯಿತು.

ಪತ್ತೆಯಾದ ವಸ್ತುವಿನೊಂದಿಗೆ ಒಂದು ಪತ್ರವೂ ಪತ್ತೆಯಾಗಿದ್ದು, ಆಗಸ್ಟ್ 1ರಂದು ನಡೆದ ಎನ್‍ಕೌಂಟರ್‍ನಲ್ಲಿ ಲಷ್ಕರ್-ಎ-ತೈಬಾ (ಎಲ್‍ಇಟಿ) ಪ್ರಾದೇಶಿಕ ಕಮ್ಯಾಂಡರ್ ಅಬು ದುಜಾನಾನನ್ನು ಹತ್ಯೆ ಮಾಡಿದ್ದಕ್ಕೆ ಘೋರ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.  ದುಜಾನಾ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಈ ಸ್ಫೋಟಕವನ್ನು ಇರಿಸಲಾಗಿದೆ ಎಂದೂ ಕೂಡ ಪತ್ರದಲ್ಲಿ ತಿಳಿಸಲಾಗಿದೆ. ಪತ್ತೆಯಾದ ವಸ್ತುವಿನಲ್ಲಿ ಪುಡಿ ಮಾದರಿಯ ಸಾಮಗ್ರಿ ಪತ್ತೆಯಾಗಿದ್ದು, ಕಡಿಮೆ ತೀವ್ರತೆಯ ಇದನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೌಮಿತ್ರಾ ಯಾದವ್ ತಿಳಿಸಿದ್ದಾರೆ.

Facebook Comments

Sri Raghav

Admin