ಆರ್‍ಜೆಡಿ ನಾಯಕ ಲಾಲು ಪ್ರಸಾದ್ ಅವರ ಆಪ್ತನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Lalu-Rasad-Yada---01

ಪಾಟ್ನಾ, ಆ.10-ರಾಷ್ಟ್ರೀಯ ಜನತಾದಳ (ಆರ್‍ಜೆಡಿ) ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‍ರ ನಂಬಿಕಸ್ಥ ಕೇದಾರ್ ರಾಯ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಇಂದು ಬೆಳಗ್ಗೆ ಬಿಹಾರದ ದಾನಾಪುರ್‍ನಲ್ಲಿ ನಡೆದಿದೆ. ಕೌನ್ಸಿಲರ್ ಆಗಿದ್ದ ಕೇದಾರ್ ರಾಯ್ ಇಂದು ಮುಂಜಾನೆ ಸುಗ್ನಾ ರಸ್ತೆಯಲ್ಲಿ ಬೆಳಗಿನ ವಾಯ ವಿಹಾರದಲ್ಲಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾದರು.
ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅವರನ್ನು ಚಿಕಿತ್ಸೆಗೆ ಕರೆತರುವ ಮುನ್ನವೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಹಂತಕರು ತೀರಾ ಸನಿಹದಿಂದ ಮೂರು ಸುತ್ತು ಗುಂಡುಗಳನ್ನು ಹಾರಿಸಿದ್ದರಿಂದ ಕೇದಾರ್ ರಾಯ್ ಹತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆರ್‍ಜೆಡಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಇವರು ಪ್ರಭಾವಿ ನಾಯಕರಾಗಿದ್ದು, ಲಾಲು ಅವರಿಗೆ ಆಪ್ತರಾಗಿದ್ದರು. ಈ ಕೃತ್ಯವನ್ನು ಲಾಲು ಪ್ರಸಾದ್ ಯಾದವ್, ಪುತ್ರ ತೇಜಸ್ವಿ ಪ್ರಸಾದ ಯಾದವ್ ಸೇರಿದಂತೆ ಅನೇಕ ನಾಯಕರು ಖಂಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರಿಗಾಗಿ ವ್ಯಾಪಕ ಬಲೆ ಬೀಸಿದ್ದಾರೆ.

 

Facebook Comments

Sri Raghav

Admin