ಕ್ಷಿಪಣಿ ದಾಳಿ ಮಾಡುವುದಾಗಿ ಅಮೆರಿಕಾಗೆ ಉತ್ತರ ಕೊರಿಯಾ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Trump-North-korea

ಸಿಯೋಲ್,ಆ.10- ಅಮೆರಿಕ-ಉತ್ತರ ಕೋರಿಯಾ ನಡುವಿನ ತಿಕ್ಕಾಟ ತೀವ್ರಗೊಳ್ಳುತ್ತಿದ್ದು, ಅಮೆರಿಕಾಗೆ ಉತ್ತರ ಕೋರಿಯಾ ಬೆದರಿಕೆ ಹಾಕಿದ್ದು, ಕ್ಷಿಪಣಿ ದಾಳಿ ನಡೆಸುವುದರ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ವರದಿಗಳು ಪ್ರಕಟವಾಗಿದೆ. ಅಧ್ಯಕ್ಷ ಟ್ರಂಪ್ ಉತ್ತರ ಕೋರಿಯಾಗೆ ಕ್ಷಿಪಣಿ ಪ್ರಯೋಗಗಳ ಬಗ್ಗೆ ಎಚ್ಚರಿಕೆ ರವಾನೆ ಮಾಡಿದ್ದರ ಬೆನ್ನಲ್ಲೇ ಉತ್ತರ ಕೋರಿಯಾ ಸಹ ಅಮೆರಿಕಾಗೆ ಎಚ್ಚರಿಕೆ ನೀಡಿದ್ದು ಕ್ಷಿಪಣಿ ದಾಳಿ ನಡೆಸುವ ಆಯ್ಕೆಯನ್ನು ಪರಿಗಣಿಸುತ್ತಿರುವುದಾಗಿ ಹೇಳಿದೆ.

ಉತ್ತರ ಕೋರಿಯಾದ ಅಣ್ವಸ್ತ್ರಗಳು ತೀವ್ರಗತಿಯಲ್ಲಿ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಉತ್ತರ ಕೋರಿಯಾ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಉತ್ತರ ಕೋರಿಯಾಗೆ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಅಮೆರಿಕಾಗೂ ಎಚ್ಚರಿಕೆ ನೀಡಿರುವ ಉತ್ತರ ಕೋರಿಯಾ, ಕ್ಷಿಪಣಿ ದಾಳಿ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ, ಯೋಜನೆಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದೆ.

Facebook Comments

Sri Raghav

Admin