ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಚೀನಿ ಕಾರ್ಯಕ್ರಮ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

Delhi-Public-Scool

ಬೆಂಗಳೂರು,ಆ.10- ನಗರದ ಪ್ರತಿಷ್ಟಿತ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ನಾಳೆ ಚೀನಾ ಹೊಸ ವರ್ಷ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ವಿಷಯ ತಿಳಿದು ಉತ್ತರ ವಲಯದ ಬಿಇಒ ನಾರಾಯಣ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಕ್ರಮ ನಡೆಯುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಚೀನಾ ನ್ಯೂ ಇಯರ್ ಕಾರ್ಯಕ್ರಮವನ್ನು ರದ್ದುಪಡಿಸುತ್ತೇವೆ. ಇದಕ್ಕೆ ಅನುಮತಿ ಪಡೆದಿಲ್ಲ. ಮಾಧ್ಯಮಗಳಲ್ಲಿ ನೋಡಿ ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಶಾಲೆ ಹೊರಡಿಸುವ ಸುತ್ತೋಲೆಯನ್ನು ಗಮನಿಸಿ ಕೂಡಲೇ ಕಾರ್ಯಕ್ರಮ ರದ್ದುಪಡಿಸುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ ಎಂದರು. ಏನಿದು ಘಟನೆ: ಡೆಲ್ಲಿ ಪಬ್ಲಿಕ್ ಶಾಲಾ ಆಡಳಿತ ಮಂಡಳಿಯು ನಾಳೆ ಚೀನಾದ ಹೊಸ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಬಗ್ಗೆ ಆಡಳಿತ ಮಂಡಳಿ ಸುತ್ತೋಲೆಯಲ್ಲಿ ಚೀನಾದ ಫುಡ್ ಫೆಸ್ಟಿವಲ್‍ನಲ್ಲಿ ಮೋಮ್ಮಸ್, ಫ್ರೈಡ್ ರೈಸ್ ಸೇರಿದಂತೆ ನಾನಾ ಆಹಾರಗಳನ್ನು ವಿದ್ಯಾರ್ಥಿಗಳು ತಯಾರಿಸಬೇಕೆಂದು ತಿಳಿಸಿತ್ತು.

ಚೀನಾ ಬಟ್ಟೆ ಇಲ್ಲದಿದ್ದರೆ ಕೆಂಪು ಬಟ್ಟೆ ಧರಿಸಬೇಕು, ಚೀನಾ ಸಂಸ್ಕøತಿಯನ್ನು ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಅದರಂತೆ ವಿದ್ಯಾರ್ಥಿಗಳು ನಾಳೆ ನಡೆಯಲಿರುವ ಚೀನಾ ಫೆಸ್ಟಿವಲ್‍ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು , ಆಡಳಿತ ಮಂಡಳಿಯು ಹಮ್ಮಿಕೊಂಡಿರುವ ಚೀನಾ ಹೊಸ ವರ್ಷಾಚರಣೆ ಭಾರೀ ವಿವಾದಕ್ಕೀಡಾಗಿದೆ.  ಈ ಬಗ್ಗೆ ವಿದ್ಯಾರ್ಥಿಯ ಪೋಷಕರು, ಆಡಳಿತ ಮಂಡಳಿ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಎಬಿವಿಪಿ ಎಚ್ಚರಿಕೆ:

ಗಡಿಯಲ್ಲಿ ಚೀನಾ ಭಾರತದ ಮೇಲೆ ಯುದ್ಧ ಮಾಡಲು ತುದಿಗಾಲಲ್ಲಿ ನಿಂತಿದ್ದು , ಇಂತಹ ಸಂದರ್ಭದಲ್ಲಿ ಚೀನಾ ಹೊಸ ವರ್ಷ ಸಮಾರಂಭ ಹಮ್ಮಿಕೊಂಡಿರುವುದು ತಪ್ಪು , ಒಂದು ವೇಳೆ ಕಾರ್ಯಕ್ರಮ ನಡೆದರೆ ಶಾಲೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

Facebook Comments

Sri Raghav

Admin