ದೆಹಲಿಯಲ್ಲಿ ಮೋಸ್ಟ್ ವಾಂಟೆಡ್ ಅಲ್-ಖೈದಾ ಉಗ್ರ ಅರೆಸ್ಟ್

Arrested-Man

ನವದೆಹಲಿ, ಆ.10-ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಪೊಲೀಸರಿಗೆ ಅಗತ್ಯವಾಗಿ ಬೇಕಾಗಿದ್ದ ಅಲ್-ಖೈದಾ ಭಯೋತ್ಪಾದನೆ ಸಂಘಟನೆಯ ಉಗ್ರನೊಬ್ಬನನ್ನು ದೆಹಲಿ ಪೊಲೀಸ್ ವಿಶೇಷ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಈತನ ಬಂಧನದೊಂದಿಗೆ ರಾಜಧಾನಿ ದೆಹಲಿ ಮೊದಲಾದ ಕಡೆ ನಡೆಯಲಿದ್ದ ಭಾರೀ ವಿಧ್ವಂಸಕ ಕೃತ್ಯದ ಸಂಚು ಬಯಲಾಗಿದೆ.  ಸೈಯದ್ ಮಹಮದ್ ಜಿಶಾನ್ ಅಲಿ ಅಲಿಯಾಸ್ ರಜಾ ಉಲ್ ಅಹಮದ್ ಬಂಧಿತ ಮೋಸ್ಟ್ ವಾಂಟೆಡ್ ಭಯೋತ್ಪಾದಕ. ಈತ ಭಾರತೀಯ ಉಪಖಂಡದ ಅಲ್ ಖೈದಾ(ಎಕ್ಯೂಐಎಸ್) ಉಗ್ರಗಾಮಿಯಾಗಿದ್ದು, ಸೌದಿ ಅರೇಬಿಯಾ ಮೂಲಕ ಕಾರ್ಯನಿರ್ವಹಿಸುತ್ತಿದ್ದ. ಈತ 2016ರ ಜೂನ್‍ನಿಂದಲೂ ದೆಹಲಿ ಪೊಲೀಸ್ ಸ್ಪೆಷಲ್ ಸೆಲ್‍ಗೆ ಬೇಕಾಗಿದ್ದ.

ದೆಹಲಿ ಪೊಲೀಸರಿಗೆ ಅಗತ್ಯವಾಗಿ ಬೇಕಾಗಿದ್ದ ಎಕ್ಯೂಐಎಸ್‍ನ ಕುಖ್ಯಾತರ ಉಗ್ರರ ಪಟ್ಟಿಯಲ್ಲಿ ಜಿಶಾನ್ ಹೆಸರೂ ಸಹ ಇತ್ತು.  ಮೂಲತಃ ಜೆಮ್‍ಶೆಡ್‍ಪುರ್‍ದ ಈತ ಸೌದಿ ಅರೇಬಿಯಾದಲ್ಲಿ ನೆಲೆಸಿ ಅಲ್ಲಿಂದಲೇ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹವಣಿಸುತ್ತಿದ್ದ. 2007ರಲ್ಲಿ ಗ್ಲಾಸ್‍ಗೌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಖಾಫೀಲ್ ಅಹಮದ್ ಸಹೋದರ ಸಂಬಂಧಿ ಸಾಬೀಲ್ ಅಹಮದ್‍ನ ಸಹೋದರಿಯನ್ನು ಈತ ವಿವಾಹವಾಗಿದ್ದ. ಜಿಶಾನ್ ಸಹೋದರ ಸೈಯದ್ ಮಹಮದ್ ಅರ್ಶಿಯಾನ್ ಸಹ ಜಾಗತಿಕ ಭಯೋತ್ಪಾದನೆ ಸಂಘಟನೆಯಾದ ಅಲ್-ಖೈದಾ ಜೊತೆ ಸಂಪರ್ಕ ಹೊಂದಿದ್ದಾನೆ. ಜಿಶಾನ್ ಬಂಧನದಿಂದಾಗಿ ಭಾರತದಲ್ಲಿ ನೆಲೆಯೂರಿರುವ ಅಲ್-ಖೈದಾ ಸಂಘಟನೆಯ ಜಾಲದ ಬಗ್ಗೆ ಮತ್ತಷ್ಟು ಮಹತ್ವದ ಮಾಹಿತಿಗಳು ಲಭಿಸಲಿದೆ.

Facebook Comments

Sri Raghav

Admin