ನವೆಂಬರ್‍ನಲ್ಲಿ ಹೈದರಾಬಾದ್‍ಗೆ ಟ್ರಂಪ್ ಪುತ್ರಿ ಇವಾಂಕ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ನವದೆಹಲಿ,ಆ.9- ನವೆಂಬರ್ ಅಂತ್ಯಕ್ಕೆ ಹೈದರಾಬಾದ್‍ನಲ್ಲಿ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ಭಾಗವಹಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡï ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ. ಈ ಶೃಂಗಸಭೆಯ ಅಮೆರಿಕ ನಿಯೋಗದ ಮುಂದಾಳತ್ವ ವಹಿಸುವಂತೆ ಕಳೆದ ಬಾರಿ ಅಮೆರಿಕಾಕ್ಕೆ ಭೇಟಿ ನೀಡಿದ್ದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವಾಂಕಾರನ್ನು ಆಹ್ವಾನಿಸಿದ್ದರು.

ಇದಕ್ಕೆ ಪ್ರತಿಯಾಗಿ ಇವಾಂಕಾ ಪ್ರಧಾನಿಗೆ ಧನ್ಯವಾದ ತಿಳಿಸಿದ್ದರು. ಅಮೆರಿಕಾದಲ್ಲಿ ವಾಣಿಜ್ಯೋದ್ಯಮಿ ಯಾಗಿರುವ ಇವಾಂಕಾ ಟ್ರಂಪ್ ಮಾಜಿ ಫ್ಯಾಶನ್ ಮಾಡೆಲ್ ಕೂಡ ಹೌದು. ತನ್ನ ತಂದೆಯ ರಾಜಕೀಯದಲ್ಲಿಯೂ ಅಲ್ಪಸ್ವಲ್ಪ ಸಹಾಯ ಮಾಡುತ್ತಾರೆ. ತನ್ನ ಪತಿ ಜೇರ್ಡ್‍ಕುಶ್ನರ್ ಜೊತೆ ಅಮೆರಿಕಾ ಸರ್ಕಾರದಲ್ಲಿ ಪ್ರಮುಖ ಸಲಹಾಗಾರ್ತಿಯಾಗಿದ್ದರೂ ಕೂಡ ರಾಜಕೀಯದಿಂದ ದೂರವುಳಿಯಲು ಪ್ರಯತ್ನಿಸುತ್ತೇನೆ ಎಂದು 35 ವರ್ಷದ ಇವಾಂಕಾ ಹೇಳುತ್ತಾರೆ.

ಸುಮಾರು 300 ದಶಲಕ್ಷ ಡಾಲರ್ ಸಂಪತ್ತು ಹೊಂದಿರುವ ಇವಾಂಕಾ ತಂದೆಗೆ ರಾಜಕೀಯದಲ್ಲಿ ಸಲಹಾಗಾರ್ತಿಯಾಗಿದ್ದರೂ ಕೂಡ ಅದಕ್ಕೆ ಸರ್ಕಾರದಿಂದ ವೇತನ ಪಡೆಯುವುದಿಲ್ಲ. ಆಕೆಯ ಪತಿ ಕೂಡ ಪಡೆಯುವುದಿಲ್ಲ. ಸರ್ಕಾರದ ಕೆಲವು ಸಮಸ್ಯೆಗಳಿಗೆ ಆಕೆ ತನ್ನ ತಂದೆಗೆ ಪ್ರಾಮಾಣಿಕ ಮತ್ತು ಮುಕ್ತ ಸಲಹೆ ನೀಡುತ್ತಾರಂತೆ.

Facebook Comments

Sri Raghav

Admin