ಪದೇ ಪದೇ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿನೀಡೋದು ಏಕೆ ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--01

ಚಾಮರಾಜನಗರ, ಆ.10-ಮೌಢ್ಯತೆ ಬಗ್ಗೆ ಯಾರೂ ಮಾತನಾಡಬಾರದು ಅಂತಾನೆ ಚಾಮರಾಜನಗರಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು. ಚಾಮರಾಜನಗರ ಆಲೂರಿನಲ್ಲಿ ರಾಚಯ್ಯ ಅವರ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಪಟ್ಟಣದಲ್ಲಿ ಜೋಡಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯತೆ ಕಿತ್ತೆಸೆದಿದ್ದೇನೆ. ಈ ಬಗ್ಗೆ ಇನ್ಯಾರೂ ಮಾತನಾಡಬಾರದು. ಯಾರಲ್ಲೂ ತಪ್ಪು ತಿಳುವಳಿಕೆ ಉಳಿಯಬಾರದು ಎಂದು ಸ್ಪಷ್ಟಪಡಿಸಿದರು.

ವೀರಶೈವ ಪ್ರತ್ಯೇಕ ಧರ್ಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ಧರ್ಮಕ್ಕೆ ಅವರು ಮನವಿ ಮಾಡಿದ್ದರು. ಎಲ್ಲರೂ ಒಟ್ಟಾಗಿ ಬನ್ನಿ ಪರಿಶೀಲಿಸೋಣ ಎಂದೆ. ಆದರೆ ಕೆಲವರು ಇದು ನನ್ನ ಪಿತೂರಿ ಎಂದು ಹಬ್ಬಿಸುತ್ತಿದ್ದಾರೆ ಎಂದರು. ಲೋಕೋಪಯೋಗಿ ಸಚಿವ ಮಹದೇವಪ್ಪ ಮಾತನಾಡಿ, ಬೀದರ್‍ನಿಂದ ಚಾಮರಾಜನಗರದವರೆಗೆ ಅಭಿವೃದ್ದಿ ಕಾಮಗಾರಿಗಳಿಗೆ ಕೆಲವೆಡೆ ಕಾನೂನಾತ್ಮಕ ತೊಡಕಿದ್ದು, ಅವೆಲ್ಲ ಸರಿಯಾಗಲಿವೆ ಎಂದರು. ಚಾಮರಾಜನಗರ ಪಚ್ಚಪ್ಪ ವೃತ್ತದಿಂದ ರಾಮಸಮುದ್ರ ಜೋಡಿ ರಸ್ತೆ 30 ಕೋಟಿ ವೆಚ್ಚ, ಪಟ್ಟಣದ ಪ್ರಮುಖ ರಸ್ತೆಗಳಿಗೆ 50 ಕೋಟಿ ರೂ.ಗಳ ಪ್ಯಾಕೇಜ್ ನೀಡಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

Facebook Comments

Sri Raghav

Admin