ಮಂಗಳೂರಿನ ಹಜ್ ಯಾತ್ರಿ ಮೆಕ್ಕಾದಲ್ಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Hujj--01

ಮೆಕ್ಕಾ, ಆ.10-ಪವಿತ್ರ ಹಜ್ ಯಾತ್ರೆಗೆ ತೆರಳಿದ್ದ ಮಂಗಳೂರಿನ ಯಾತಾರ್ಥಿಯೊಬ್ಬರು ಅನಾರೋಗ್ಯದಿಂದಾಗಿ ಮೆಕ್ಕಾದ ಅರಾಫತ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರನ್ನು ಮಂಗಳೂರಿನ ಬಂದರ್ ನಿವಾಸಿ ಅಬ್ದುಲ್ಲಾ ಎಂದು ಗುರುತಿಸಲಾಗಿದೆ.  ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಅವರು ಕೊನೆಯುಸಿರೆಳೆದರು.  ಅಬ್ದುಲ್ಲಾ ಅವರು ಹಜ್ ಕರ್ಮ ನಿರ್ವಹಿಸಲು ತಮ್ಮ ಪತ್ನಿ ಮತ್ತು ಪುತ್ರನೊಂದಿಗೆ ಜುಲೈ 24ರಂದು ಮೆಕ್ಕಾಗೆ ಆಗಮಿಸಿದ್ದರು.  ಕರ್ನಾಟಕದ ಸಾಮಾಜಿಕ ಸಂಘಟನೆಗಳಾದ ಇಂಡಿಯಾ ಫ್ರಟಿರ್ನಿಟಿ ಪೋರಂ ಮತ್ತು ಕರ್ನಾಟಕ ಕಲ್ಚರ್ ಫೌಂಡೇಶನ್‍ನ ಮೆಕ್ಕಾ ವಲಯದ ಕಾರ್ಯಕರ್ತರು ಮೃತರ ಅಂತ್ಯಕ್ರಿಯೆಗೆ ನೆರವಾದರು.

Facebook Comments

Sri Raghav

Admin