‘ಮಂದಿರ ಧ್ವಂಸಮಾಡಿ ಬಾಬರಿ ಮಸೀದಿ ರ್ಮಿಸಲಾಗಿದೆ’

ಈ ಸುದ್ದಿಯನ್ನು ಶೇರ್ ಮಾಡಿ

Ram-Mandir--01

ನವದೆಹಲಿ,ಆ.10-ಏಳು ದಶಕಗಳಿಂದ ಬಾಬರಿ ಮಸೀದಿ ಒಡೆತನಕ್ಕಾಗಿ ಹೋರಾಟ ನಡೆಸುತ್ತಿರುವ ಶಿಯಾ ವಕ್ಫ್ ಮಂಡಳಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಪ್ರಮಾಣಪತ್ರ ಸಲ್ಲಿಸಿದೆ. ಈ ಸ್ಥಳದಲ್ಲಿದ್ದ ಮಂದಿರವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಮಹತ್ವದ ಅಂಶವನ್ನು ಅಫಿಡವಿಟ್‍ನಲ್ಲಿ ತಿಳಿಸಲಾಗಿದೆ.  ಈ ಪ್ರಮಾಣಪತ್ರದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಸಂಘರ್ಷ ಹೊಸ ದಿಕ್ಕಿನತ್ತ ಸಾಗುವ ಸಾಧ್ಯತೆಯೂ ದಟ್ಟವಾಗಿದೆ.

1846ರ ಮಾರ್ಚ್ 30ರಂದು ನೀಡಿದ ಆದೇಶದಂತೆ ಬಾಬರಿ ಮಸೀದಿಯು ಸುನ್ನಿ ವಕ್ಫ್ ಮಂಡಳಿಗೆ ಸೇರಿದ್ದಾಗಿದೆ. ಇದರ ವಿರುದ್ಧ ಹೋರಾಟ ನಡೆಸುತ್ತಿರುವ ಶಿಯಾ ವಕ್ಫ್ ಮಂಡಳಿ ಪ್ರಮಾಣ ಪತ್ರ ಸಲ್ಲಿಸಿದ್ದು ಅದರಲ್ಲಿನ ಅಂಶಗಳು ಕುತೂಹಲ ಕೆರಳಿಸಿವೆ.  ಅಯೋಧ್ಯೆಯ ವಿವಾದಿತ ಸ್ಥಳ ಕುರಿತು ಸುಪ್ರೀಂಕೋರ್ಟ್ ನ್ಯಾಯಪೀಠವೊಂದು ನಾಳೆಯಿಂದ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈಗಾಗಲೇ ಸಲ್ಲಿಕೆಯಾಗಿರುವ ಹಲವಾರು ಅರ್ಜಿಗಳ ಜೊತೆಗೆ ಈ ಮನವಿಯನ್ನೂ ಪುರಸ್ಕರಿಸಬೇಕೆಂದು ಮಂಡಳಿಯು ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದೆ.

ವಿವಾದಿತ ಸ್ಥಳದಿಂದ ದೂರದಲ್ಲಿ ಅಥವಾ ಮುಸ್ಲಿಂ ಜನಾಂಗದ ಪ್ರಾಬಲ್ಯವಿರುವ ಸ್ಥಳದಲ್ಲಿ ಮಸೀದಿ ನಿರ್ಮಿಸಬಹುದು ಎಂದು ಇದೇ ಮಂಡಳಿಯು ಕೆಲವು ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್‍ಗೆ ಪ್ರಮಾಣಪತ್ರ ಸಲ್ಲಿಸಿತ್ತು.

Facebook Comments

Sri Raghav

Admin