ಯೋಧರು ಅತ್ಯಾಚಾರಿಗಳು : ಪಠ್ಯದಲ್ಲಿ ಆಯ್ತು ಮತ್ತೊಂದು ಎಡವಟ್ಟು

Rape--Text-Book

ಮಂಗಳೂರು, ಆ.10- ಶೈಕ್ಷಣಿಕ ವರ್ಷ ಆರಂಭವಾದರೂ ಪಠ್ಯಪುಸ್ತಕ ಬರದೆ ವಿದ್ಯಾರ್ಥಿಗಳು ಒಂದಿಲ್ಲೊಂದು ತೊಂದರೆ ಅನುಭವಿಸುತ್ತಿರುವ ಬೆನ್ನಲ್ಲೇ ಇಲ್ಲಿನ ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಕನ್ನಡ ಪಠ್ಯದಲ್ಲಿ ಸೈನಿಕರನ್ನು ಅತ್ಯಾಚಾರಿಗಳೆಂದು ಬಿಂಬಿಸಲಾಗಿದ್ದು, ಇದು ಭಾರೀ ವಿವಾದಕ್ಕೀಡಾಗಿದೆ. ಬಿಸಿಎ ಪ್ರಥಮ ಸೆಮಿಸ್ಟರ್‍ನ ಕನ್ನಡ ಪಠ್ಯ ಪುಸ್ತಕದಲ್ಲಿ ಸೈನಿಕರು ಅತ್ಯಾಚಾರಿಗಳು ಎಂದು ಬಿಂಬಿಸುವ ಪಠ್ಯವಿದೆ. ಯುದ್ಧ ಒಂದು ಉದ್ಯಮ ಎಂದು ಪಠ್ಯದಲ್ಲಿ ಉಲ್ಲೇಖವಾಗಿದೆ.

ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬರೆದಿದ್ದಾರೆ. ಎನ್ನಲಾದ ಪಠ್ಯದಲ್ಲಿ ಯುದ್ಧ ಸನ್ನಿವೇಶದಲ್ಲಿ ಗಡಿ ಗ್ರಾಮಗಳಲ್ಲಿ ಅತ್ಯಾಚಾರವಾಗುತ್ತೆ, ಎರಡು ಕಡೆಯ ಕೆಲ ಯೋಧರೂ ಅತ್ಯಾಚಾರ ಮಾಡುತ್ತಾರೆ.  ಮನೆಯನ್ನು ಬಿಟ್ಟು ಬಂದ ಸೈನಿಕರಿಗೆ ಕೆಲವೊಮ್ಮೆ ಒಂಟಿತನ ಕಾಡುತ್ತದೆ. ಹೀಗಾಗಿ ಕೆಲವು ಸೈನಿಕರು ಅತ್ಯಾಚಾರ ಮಾಡುತ್ತಾರೆ. ಆದರೆ ನಾವು ಸೈನಿಕರನ್ನು ಸಂಭಾವಿತರು, ಸಜ್ಜನರು ಎಂದು ನಂಬುತ್ತೇವೆ ಎಂಬ ಅಂಶವು ವಿವಿ ಪ್ರಸಾರಾಂಗ ಪ್ರಕಟಿಸಿದ ಪಠ್ಯದಲ್ಲಿ ಕಂಡುಬಂದಿದೆ. ಇದು ಭಾರೀ ವಿವಾದಕ್ಕೀಡಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ , ಯುದ್ಧವೊಂದು ಉದ್ಯಮವಾಗಿದೆ, ಯೋಧರು ಹೇಳಿದ್ದನ್ನು ನಾನು ಬರೆದಿದ್ದೇನೆ ಅಷ್ಟೆ. ಇದರಲ್ಲಿ ನನ್ನ ಅಭಿಪ್ರಾಯವೂ ಏನಿಲ್ಲ. ಈ ಬಗ್ಗೆ ನನಗೆ ಈಗ ಗಮನಕ್ಕೆ ಬಂದಿದೆ. ಮುದ್ರಣ ದೋಷದಿಂದ ಇಂಥ ಎಡವಟ್ಟಾಗಿದೆ ಎಂದಿದ್ದಾರೆ.

Facebook Comments

Sri Raghav

Admin