ರಾಜಮನೆತನದ ಆಸ್ತಿಗಾಗಿ ಶರ್ಮಿಳಾ ಠಾಗೋರ್ ಕಾನೂನು ಸಮರ

ಈ ಸುದ್ದಿಯನ್ನು ಶೇರ್ ಮಾಡಿ

rmila-Tagore--01

ಭೋಪಾಲ್, ಆ.10-ಭೋಪಾಲ್ ರಾಜಮನೆತನಕ್ಕೆ ಸೇರಿದ ಸ್ವತ್ತನ್ನು ಉಳಿಸಿಕೊಳ್ಳಲು ಹಿರಿಯ ಅಭಿನೇತ್ರಿ ಶರ್ಮಿಳಾ ಠಾಗೋರ್ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.  ಮಧ್ಯಪ್ರದೇಶದ ಭೋಪಾಲ್‍ನ ನಯನ ಮನೋಹರ ಕೋ-ಇ-ಫಿಜಾ ಪ್ರದೇಶದಲ್ಲಿನ ವಸತಿ ಸ್ವತ್ತಿನ ಅಧಿಭೋಗದಾರರ ವಿರುದ್ಧ ಭೋಪಾಲ್ ರಾಜ ಪರಿವಾರದ ಪರವಾಗಿ ಶರ್ಮಿಳಾ ದೂರು ನೀಡಿದ್ದಾರೆ.  ಕ್ರಿಕೆಟ್ ಪಟು ದಿವಂಗರ ಮನ್ಸೂಲ್ ಅಲಿ ಖಾನ್ ಪಟೌಡಿಯವರ ಪತ್ನಿ ಮತ್ತು ಬಾಲಿವುಡ್ ನಟ ಸೈಫ್ ಅಲಿ ಖಾನ್ ಸ್ವತ್ತಿನ ಮಾಲೀಕತ್ವದ ಹಕ್ಕನ್ನು ಪ್ರತಿಪಾದಿಸಿದ್ದಾರೆ.

ಭೋಪಾಲ್‍ನ ಕೊನೆಯ ನವಾಬರಾಗಿದ್ದ ಹಮಿದುಲ್ಲಾ ಖಾನ್ ಅವರ ಮೊಮ್ಮಗನಾದ ಪಟೌಡಿ ರಾಜಮನೆತನದ ಕಾನೂನುಬದ್ಧ ಉತ್ತರಾಧಿಕಾರಿಯಾಗಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಶರ್ಮಿಳಾ ಠಾಗೋಲ್ ದಾರ್-ಉಸ್-ಸಲಾಂ ಸ್ವತ್ತಿನ ಮೇಲೆ ತಮ್ಮ ಒಡೆತನದ ಹಕ್ಕನ್ನು ಪ್ರತಿಪಾದಿಸಿದ್ದರು.   ಈಗ ಅಭಿನೇತ್ರಿ ಕೊ-ಇ-ಫಜ್ ಆಸ್ತಿಯ ಮೇಲೆ ಹಕ್ಕು ಇರುವುದಾಗಿ ಹೇಳಿಕೊಂಡು ದೂರು ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅಧಿಭೋಗದಾರರಿಗೆ ನೋಟಿಸ್ ಜಾರಿಗೊಳಿಸಿದೆ.

Facebook Comments

Sri Raghav

Admin