ಲಂಕಾ ನೌಕಾಪಡೆಯಿಂದ ತಮಿಳುನಾಡಿನ 12 ಬೆಸ್ತರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರಂ, ಆ.10-ಲಂಕಾ ಕರಾವಳಿಯಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ತಮಿಳುನಾಡಿನ 12 ಬೆಸ್ತರನ್ನು ಶ್ರೀಲಂಕಾ ನೌಕಾಪಡೆ ಇಂದು ಬಂಧಿಸಿದೆ. ಕಳೆದ ಮೂರು ದಿನಗಳಲ್ಲಿ ಇಂದು 2ನೇ ಪ್ರಕರಣವಾಗಿದೆ. ಶ್ರೀಲಂಕಾ -ಭಾರತ ಜಲಗಡಿ ಬಳಿ ದೆಡುತೀವ್ರ ಎಂಬಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಲಂಕಾ ನೌಕಾಪಡೆ ಸಿಬ್ಬಂದಿ ಅವರನ್ನು ಬಂಧಿಸಿದರು ಎಂದು ಮೀನುಗಾರಿಕೆ ಇಲಾಖೆ ನಿರೀಕ್ಷಕ ಬಾಲಾ ತಿಳಿಸಿದ್ದಾರೆ.

ಬಂಧಿತ ಮೀನುಗಾರರನ್ನು ಶ್ರೀಲಂಕಾದ ಕಂಗೆಸನ್‍ಥುರೈಗೆ ಕರೆದೊಯ್ಯಲಾಗಿದೆ. ಬೆಸ್ತರ ಮೂರು ದೋಣಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆ.೮ರಂದು ಪುದುಕೊಟ್ಟೈ ಮತ್ತು ಜಗದಪಟ್ಟಣಂ ಜಿಲ್ಲೆಗಳ ಸುಮಾರು 50 ಮೀನುಗಾರರನ್ನು ಇದೇ ಕಾರಣಕ್ಕಾಗಿ ಶ್ರೀಲಂಕಾ ಜಲಗಡಿ ಬಳಿ ಬಂಧಿಸಲಾಗಿದೆ.

Facebook Comments

Sri Raghav

Admin