ಷೇರುಗಳು, ಮ್ಯೂಚುಯಲ್ ಫಂಡ್‍ಗಳ ಖರೀದಿಗೂ ಆಧಾರ್ ಕಡ್ಡಾಯ

Aadhar

ನವದೆಹಲಿ, ಆ.10-ಕಾಳ ಧನದ ವಹಿವಾಟಿಗೆ ಕಡಿವಾಣ ಹಾಕಲು ಷೇರುಗಳು ಮತ್ತು ಮ್ಯೂಚುಯಲ್ ಫಂಡ್‍ಗಳ ಖರೀದಿಗೂ ಸದ್ಯದಲ್ಲೇ ಆಧಾರ್ ಕಾರ್ಡ್ ಕಡ್ಡಾಯಗೊಳ್ಳಲಿದೆ. ಹಣಕಾಸು ಮಾರುಕಟ್ಟೆ ವ್ಯವಹಾರಗಳಿಗೂ ಆಧಾರ್ ಜೋಡಣೆಗೆ ಕೇಂದ್ರ ಸರ್ಕಾರ ಮತ್ತು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರವು ಸದ್ಯದಲ್ಲೇ ಷೇರುಗಳು ಮತ್ತು ಮ್ಯೂಚುಯಲ್ ಫಂಡ್‍ಗಳ ಖರೀದಿಗಾಗಿ ಆಧಾರ್ ವಿವರಗಳನ್ನು ನೀಡುವುದನ್ನು ಕಡ್ಡಾಯಗೊಳಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಷೇರು ವಿನಿಮಯದ ಮೂಲಕ ಕಪ್ಪು ಹಣವನ್ನು ಬಿಳಿಯಾಗಿಸುವ ದಂಧೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ವರದಿಗಳು ಹೇಳಿವೆ.  ಅಕ್ರಮ ಮತ್ತು ಕಾನೂನುಬಾಹಿರ ವ್ಯವಹಾರಗಳನ್ನು ತಡೆಗಟ್ಟಲು ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿರುವುದು ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನವಾಗಿಲ್ಲ. ಇದರೊಂದಿಗೆ ಆಧಾರ್ ಕಾರ್ಡ್‍ನ್ನು ಜಾರಿಗೊಳಿಸಿ ಕಾಳದಂಧೆಗೆ ಲಗಾಮು ಹಾಕುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

ಕೇಂದ್ರ ಸರ್ಕಾರ ಜುಲೈ 1ರಿಂದ ಜಾರಿಗೆ ಬರುವಂತೆ ತೆರಿಗೆ ಪಾವತಿದಾರರ ಆಧಾರ್ ಕಾರ್ಡ್‍ಗಳನ್ನು ಪ್ಯಾನ್ ಜೊತೆ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಿದೆ. ದೇಶದಲ್ಲಿ 25 ಕೋಟಿ ಪ್ಯಾನ್ ಕಾರ್ಡ್‍ದಾರರಿದ್ದು, 111 ಕೋಟಿ ಜನರಿಗೆ ಆಧಾರ್ ಕಾರ್ಡ್‍ಗಳನ್ನು ವಿತರಿಸಲಾಗಿದೆ.

Facebook Comments

Sri Raghav

Admin