ಆರೋಗ್ಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿದ ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-02

ಬೆಂಗಳೂರು, ಆ.11- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆರೋಗ್ಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ. ಕೆಮ್ಮು ಮತ್ತು ಕಫದ ಹಿನ್ನೆಲೆಯಲ್ಲಿ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ತಪಾಸಣೆಗೊಳಗಾಗಲಿರುವ ಅವರು ನಾಳೆ ಹಿಂತಿರುಗಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.  ವಿಶ್ರಾಂತ ಕುಲಪತಿ ರಂಗಪ್ಪ ಅವರ ಜತೆ ತೆರಳಿರುವ ಕುಮಾರಸ್ವಾಮಿಯವರು ತಪಾಸಣೆ ನಂತರ ಚಿಕಿತ್ಸೆ ಪಡೆದು ನಾಳೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಕೆಮ್ಮು ಮತ್ತು ಕಫದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಕೆಲಕಾಲ ಚಿಕಿತ್ಸೆ ಪಡೆದಿದ್ದರು.ಹೆಚ್ಚಿನ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿರುವ ಅವರು ನಾಳೆಯೇ ವಾಪಸ್ ಬರಲಿದ್ದಾರೆ.

ಸತತ ಪ್ರವಾಸ, ಸಮಾರಂಭ, ಮೆರವಣಿಗೆಗಳಲ್ಲಿ ಭಾಗವಹಿಸಿದ್ದರಿಂದ ಕುಮಾರಸ್ವಾಮಿಯವರು ಬಳಲಿದ್ದರು. ಮೆರವಣಿಗೆ ಸಂದರ್ಭದಲ್ಲಿ ಸಿಡಿಸಿದ ಪಟಾಕಿಗಳ ಹೊಗೆಯಿಂದ ಅವರಿಗೆ ಕೆಮ್ಮಿನ ಸಮಸ್ಯೆಯಾಗಿತ್ತು. ಅಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲಿ ನಡೆಸಿದ ಪ್ರವಾಸದಲ್ಲಿ ಬಿಸಿಲು ಮತ್ತು ಧೂಳಿನಿಂದ ಕೆಮ್ಮು ಮತ್ತು ಕಫದ ಸಮಸ್ಯೆಯಾಗಿತ್ತು.

Facebook Comments

Sri Raghav

Admin