ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಬಣ್ಣಿಸಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ನವದೆಹಲಿ, ಆ.11-ಉಪ ರಾಷ್ಟ್ರಪತಿಯಾಗಿರುವ ಎಂ.ವೆಂಕಯ್ಯ ನಾಯ್ಡು ಅವರು ಸಂಸತ್ತಿನಲ್ಲಿ ದೀರ್ಘ ಅನುಭವದಿಂದ ಇಂದು ಉನ್ನತ ಹುದ್ದೆಗೆ ಏರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ಉಪ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಜ್ಯಸಭೆಗೆ ಆಗಮಿಸಿ ಸಭಾಪತಿಯಾಗಿ ನಾಯ್ಡು ಪದಗ್ರಹಣ ಮಾಡಿದರು.

Modi--02

ಅವರನ್ನು ಸ್ವಾಗತಿಸಿ ಅಭಿನಂದಿಸಿದ ಮೋದಿ. ವೆಂಕಯ್ಯ ನಾಯ್ಡು ಅವರು ಬೇರು ಮಟ್ಟದಿಂದ ಉನ್ನತ ಸ್ಥಾನದವರೆಗೆ ಸಾಧನೆ ಮಾಡಿದ್ದಾರೆ. ಅವರ ಪರಿಶ್ರಮ ಮತ್ತು ಸಾಧನೆಯ ಫಲಶ್ರುತಿಯಾಗಿ ಇಂದು ಉಪ ರಾಷ್ಟ್ರಪತಿ ಹುದ್ದೆ ಲಭಿಸಿದೆ. ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂದು ಪ್ರಶಂಸಿದರು.
ನಿರ್ಗಮಿತ ಉಪ ರಾಷ್ಟ್ರಪತಿ ಮತ್ತು ಮೇಲ್ಮನೆ ಸಭಾಪತಿಯಾಗಿದ್ದ ಹಮೀದ್ ಅನ್ಸಾರಿ ಸೇರಿದಂತೆ ರಾಜ್ಯಸಭೆ ಸದಸ್ಯರು ನಾಯ್ಡು ಅವರನ್ನು ಅಭಿನಂದಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು.

Facebook Comments

Sri Raghav

Admin