ಕಲಾಪಕ್ಕೆ ಕೈಕೊಟ್ಟರೆ ಟಿಕೆಟ್ ಕೈತಪ್ಪುತ್ತೆ ಹುಷಾರ್ : ಸಂಸದರಿಗೆ ಮೋದಿ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Modi-Warning--01

ನವದೆಹಲಿ, ಆ.11-ಲೋಕಸಭೆಯ ಕಲಾಪಕ್ಕೆ ನಿರಂತವಾಗಿ ಗೈರು ಹಾಜರಾಗುವ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಬಿಸಿ ಮುಟ್ಟಿಸಿದ್ದಾರೆ. ನಿಮ್ಮ ಚಾಳಿ ಇದೇ ರೀತಿ ಮುಂದುವರಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಮಗೆ ಸುಲಭವಾಗಿ ಟಿಕೆಟ್ ಲಭಿಸುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಅವರು ನೇರವಾಗಿ ಎಚ್ಚರಿಕೆ ನೀಡಿ ಸಂಸದರನ್ನು ತಬ್ಬಿಬ್ಬುಗೊಳಿಸಿದ್ದಾರೆ.  ಲೋಕಸಭೆ ಕಲಾಪಗಳಿಗೆ ಸತತವಾಗಿ ಗೈರು ಹಾಜರಾಗುತ್ತಿರುವ ಬಿಜೆಪಿ ಸಂಸದರ ವರ್ತನೆ ಬಗ್ಗೆ ಮೋದಿ ಮತ್ತೆ ಗರಂ ಆಗಿದ್ದಾರೆ.

ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ಕುರಿತು ಪ್ರಮುಖ ಮಸೂದೆ ಕುರಿತ ಚರ್ಚೆ ವೇಳೆ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರು ವಿರಳವಾಗಿದ್ದರಿಂದ ಮೋದಿ ಕುಪಿತರಾಗಿ ಈ ಎಚ್ಚರಿಕೆ ನೀಡಿದ್ದಾರೆ. ಲೋಕಸಭೆಯ ಸದಸ್ಯರಿಗೂ ಈ ಮೂಲಕ ಬಿಸಿ ಮುಟ್ಟಿಸಿದರು.
ನೀವು ನಿಮ್ಮ ಇಚ್ಚೆಯಂತೆ ಇರಿ. ನಾನು ಕೂಡ 2019ರ ಚುನಾವಣೆಯಲ್ಲಿ ನನ್ನ ಇಚ್ಚೆಯಂತೆ ಕಾರ್ಯನಿರ್ವಹಿಸುತ್ತೇನೆ. ಆಗ ನನ್ನನ್ನು ನೀವು ದೂರಬೇಡಿ. ಸಂಸದರ ಕಾಯಕ್ಷಮತೆ ಪರಾಮರ್ಶೆ ಬಳಿಕವಷ್ಟೇ ಮರು ಆಯ್ಕೆಗೆ ರಹದಾರಿ ಲಭಿಸುತ್ತದೆ ಎಂದು ಮೋದಿ ಕಳೆದ ಸಂಸದೀಯ ಪಕ್ಷದ ಸಭೆಯಲ್ಲಿ ಸ್ಪಷ್ಟಪಡಿಸಿದ್ದರು.

Facebook Comments

Sri Raghav

Admin