ಕಾಶ್ಮೀರದಲ್ಲಿ ಭಾರತೀಯ ವಾಯು ಪಡೆಯ ಯುಎವಿ ಪತನ

ಈ ಸುದ್ದಿಯನ್ನು ಶೇರ್ ಮಾಡಿ

UAV-01

ಜಮ್ಮು, ಆ.11-ಭಾರತೀಯ ವಾಯು ಪಡೆಯ ಮಾನವರಹಿತ ವೈಮಾನಿಕ ವಾಹನ (ಯುಎವಿ) ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಕತುವಾದಲ್ಲಿ ಇಂದು ಮುಂಜಾನೆ ಪತನಗೊಂಡಿದೆ. ರೇಡಾರ್‍ನೊಂದಿಗೆ ಸಂಪರ್ಕ ಕಳೆದುಕೊಂಡ ಈ ಹಾರುವ ಯಂತ್ರ ಜಿಲ್ಲೆಯ ಚಾದ್ವಾಲ್ ಪಟ್ಟಿಯಲ್ಲಿ ಲಾಡೋಲ್ ಗ್ರಾಮದ ಬಳಿ ಪತನಗೊಂಡಿತು. ಯುಎವಿಗಾಗಿ ತಕ್ಷಣ ಶೋಧ ನಡೆಸಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಲೇಮಾನ್ ಚೌಧರಿ ತಿಳಿಸಿದ್ದಾರೆ. ಈ ವಾಹನ ಪತನಗೊಂಡ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

Facebook Comments

Sri Raghav

Admin