ಪ್ರಥಮ ಬಾರಿಗೆ ಸುಧಾರಿತ ರೇಡಾರ್‍ನೊಂದಿಗೆ ಹಾರಿದ ಜಾಗ್ವಾರ್ ಯುದ್ಧ ವಿಮಾನ

ಈ ಸುದ್ದಿಯನ್ನು ಶೇರ್ ಮಾಡಿ

Jaguar--01

ಬೆಂಗಳೂರು, ಆ.11- ಎಇಎಸ್‍ಎ(ಆಕ್ಟಿವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರ್ರೆ) ರೇಡಾರ್ ಅಳವಡಿಸಿರುವ ಸುಧಾರಿತ ಜಾಗ್ವಾರ್ ಯುದ್ಧ ವಿಮಾನವನ್ನು ಸರ್ಕಾರಿ ಒಡೆತನದ ಹಿಂದೂಸ್ತಾನ್ ಏರೋನಾಟಿಕಲ್ಸ್ ಲಿಮಿಟೆಡ್‍ನ(ಎಚ್‍ಎಎಲ್) ಪರೀಕ್ಷಾರ್ಥ ಪೈಲೆಟ್ ಮತ್ತು ತಂತ್ರಜ್ಞರ ತಂಡವು ಇದೇ ಮೊದಲ ಬಾರಿಗೆ ಹಾರಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಭಾರತದ ವಾಯ ಪಡೆಯ ರಕ್ಷಣಾ ಸಾಮಥ್ರ್ಯ ಮತ್ತಷ್ಟು ಬಲಗೊಂಡಂತಾಗಿದೆ.

ಜಾಗ್ವಾರ್ ಡೆರೆನ್-3 ಫೈಟರ್ ಜೆಟ್‍ನನ್ನು ಎಚ್‍ಎಎಲ್ ಭಾರತೀಯ ವಾಯು ಪಡೆಗಾಗಿ(ಐಎಎಫ್) ಅಭಿವೃದ್ದಿಗೊಳಿಸಿದ್ದು, ದೇಶೀಯ ತಂತ್ರಜ್ಞಾನದ ಎಇಎಸ್‍ಎ ರೇಡಾರ್ ಮತ್ತು ಬಹು ಗುರಿಯುಳ್ಳ ಜಾಡು ಪತ್ತೆ ಮಾಡುವ ಸಾಮಥ್ರ್ಯ, ಕಾರ್ಯಾಚರಣೆಯ ಅಧಿಕ ಬ್ಯಾಂಡ್‍ವಿಡ್ತ್, ಅತ್ಯಂತ ನಿಖರ ಮತ್ತು ಸೂಕ್ಷ್ಮ ಕಾರ್ಯಾಚರಣೆಗೆ ಇದು ನೆರವಾಗಲಿದೆ.

ಎಚ್‍ಎಎಲ್ ಮತ್ತು ಇಸ್ರೇಲಿ ಸಂಸ್ಥೆ ಎಲ್ಟಾ ಜಾಗ್ವಾರ್ ಯುದ್ಧ ವಿಮಾನಕ್ಕೆ ಈ ಅತ್ಯಾಧುನಿಕ ರೇಡಾರ್‍ನನ್ನು ಅಳವಡಿಸಿದ್ದು, ಪ್ರಾಯೋಗಿಕ ಪರೀಕ್ಷೆಯಲ್ಲಿ ಸಂಪೂರ್ಣ ಸಫಲವಾಗಿದೆ. ಎಇಎಸ್‍ಎ ರೇಡಾರ್ ಅಲ್ಲದೇ, ಈ ಫೈಟರ್ ಜೆಟ್‍ಗೆ 28 ಹೊಸ ಸನ್ಸೋರ್‍ಗಳು (ದೂರ ಸಂವೇದಿ ಸಾಧನಗಳು) ಅಳವಡಿತವಾಗಿವೆ.

Facebook Comments

Sri Raghav

Admin