ಬಲೂನ್ ನುಂಗಿ 8 ತಿಂಗಳ ಮಗು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Ballolon

ನಾಸಿಕ್, ಆ.11-ರಬ್ಬರ್ ಬಲೂನ್ ನುಂಗಿ 8 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಹನುಮಾನ್ ನಗರದಲ್ಲಿ ನಿನ್ನೆ ನಡೆದಿದೆ. ಸಿಡ್ಕೋ ವ್ಯಾಪ್ತಿಯ ಹನುಮಾನ್‍ನಗರದ ಮನೆಯಲ್ಲಿ ರಬ್ಬರ್ ಬಲೂನ್‍ನೊಂದಿಗೆ ಆಟವಾಡುತ್ತಿದ್ದ ಮಗು ಬಲೂನನ್ನು ನುಂಗಿದೆ. ಕೂಡಲೇ ಪೋಷಕರು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಾಸಿಕ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ಖಚಿತಪಡಿಸಿದ್ದಾರೆ ಎಂದು ಅಹಮ್ಮದ್ ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin