ಮೋಮೋಸ್ ತಿಂದು 25 ಮಕ್ಕಳು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

momos

ನವದೆಹಲಿ, ಆ.11- ಬೀದಿ ಬದಿ ತಿಂಡಿಗಳು ಹಾಗೂ ಚೀನೀ ಆಹಾರಗಳು ಆರೋಗ್ಯ ಮೇಲೆ ದುಷ್ಪರಿಣಾಮಗಳು ಬೀರುತ್ತವೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಈಗ ಅಂತಹ ಘಟನೆ ನವದೆಹಲಿಯ ರಾಜಪುರ್ ಕುದ್ರ್ ಎಂಬ ಗ್ರಾಮದಲ್ಲಿ ನಡೆದಿದೆ. ನವದೆಹಲಿಯ ರಾಜ್‍ಪುರ್ ಕುದ್ರ್ ಗ್ರಾಮದ ದಿಲೀಪ್ ಎಂಬ ಬೀದಿ ಬದಿಯ ಹೊಟೇಲ್‍ನಲ್ಲಿ ಮೋಮೋಜ್ (ಚೀನಿ ಆಹಾರ) ತಿಂದು 25 ಮಂದಿ ಅಸ್ವಸ್ಥಗೊಂಡಿದ್ದು ಅದರಲ್ಲಿ 2 ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಮೆರುಳಿ ಠಾಣೆಯಲ್ಲಿ ಅಂಗಡಿಯ ಮಾಲೀಕನ ವಿರುದ್ಧ ದೂರು ನೀಡಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Facebook Comments

Sri Raghav

Admin