ವಿಶ್ವ ಚಾಂಪಿಯನ್ ಟೂರ್ನಿಯಲ್ಲಿ ದೇವಿಂದರ್ ದಾಖಲೆ

Devendar-1

ಲಂಡನ್, ಆ.11- ವಿಶ್ವ ಚಾಂಪಿಯನ್ಸ್ ಟೂರ್ನಿಮೆಂಟ್‍ನ ಜಾವೆಲಿನ್ ವಿಭಾಗದಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿದ್ದ ನೀರಜ್ ಚೋಪ್ರಾ ನಿರಾಸೆ ಮೂಡಿಸಿದರೂ ದೇವಿಂದರ್ ಕಂಗ್ ಅವರು ಫೈನಲ್ಸ್‍ಗೆ ಅರ್ಹತೆ ಪಡೆಯುವ ಮೂಲಕ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಇದುವರೆಗೂ ವಿಶ್ವ ಚಾಂಪಿಯನ್ಸ್ ಟೂರ್ನಿಮೆಂಟ್‍ನ ಫೈನಲ್‍ಗೆ ಯಾವೊಬ್ಬ ಭಾರತೀಯ ಕ್ರೀಡಾಪಟು ಕೂಡ ಅರ್ಹತೆ ಪಡೆದಿರಲಿಲ್ಲ ಆ ಕೊರಗನ್ನು ದೇವಿಂದರ್ ನೀಗಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಗ್ರೂಪ್ ಬಿ ವಿಭಾಗದಲ್ಲಿ ನಿನ್ನೆ ಅರ್ಹತೆ ಪಂದ್ಯದಲ್ಲಿ ಪಾಲ್ಗೊಂಡಿದ್ದ ದೇವಿಂದರ್ ಭುಜದ ನೋವಿನಿಂದ ಬಳಲಿದರೂ ಕೂಡ ಮೂರು ಪ್ರಯತ್ನಗಳಲ್ಲೂ ಕ್ರಮವಾಗಿ 82.22 ಮೀ, 82.14 ಮೀ, ಅಂತಿಮ ಸುತ್ತಿನಲ್ಲಿ 83 ಮೀಟರ್‍ಗಳವರೆಗೆ ಜಾವೆಲಿನ್ ಅನ್ನು ಎಸೆಯುವ ಮೂಲಕ ಫೈನಲ್ ಪಂದ್ಯಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಚಾಂಪಿಯನ್ಸ್ ಟೂರ್ನಿಮೆಂಟ್‍ನ ಫೈನಲ್ ಸುತ್ತಿಗೆ ಅರ್ಹತೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವಂದರ್, ನೀರಜ್ ಚೋಪ್ರಾ ಅವರು ಅರ್ಹತೆ ಸುತ್ತಿನಲ್ಲಿ ಎಡವಿದ ನಂತರ ನಾನು ಫೈನಲ್ಸ್‍ಗೆ ಅರ್ಹತೆ ಪಡೆಯಲೇಬೇಕೆಂದು ಯೋಚಿಸಿ ನನ್ನ ಭುಜದ ಸಮಸ್ಯೆಯನ್ನು ಲೆಕ್ಕಿಸದೆ ಸೂಕ್ತ ಪ್ರದರ್ಶನವನ್ನು ತೋರಿಸಿದೆ. ಆಗಸ್ಟ್ 12 ರಂದು ನಡೆಯಲಿರುವ ಫೈನಲ್‍ನಲ್ಲಿ ಗೆಲ್ಲುವ ಮೂಲಕ ದೇಶದ ಘನತೆಯನ್ನು ಹೆಚ್ಚಿಸಲು ಶ್ರಮಿಸುತ್ತೇನೆ ಎಂದರು.

Facebook Comments

Sri Raghav

Admin