ಸಾಲು ಸಾಲು ರಜೆ : ಊರಿಗೆ ಹೊರಟವರನ್ನು ಸುಲಿಗೆ ಮಾಡುತ್ತಿವೆ ಖಾಸಗಿ ಬಸ್’ಗಳು

ಈ ಸುದ್ದಿಯನ್ನು ಶೇರ್ ಮಾಡಿ

Private-Bus--01

ಬೆಂಗಳೂರು, ಆ.11- ನಾಳೆ ಎರಡನೆ ಶನಿವಾರ, ನಾಡಿದ್ದು ಭಾನುವಾರ. ಸೋಮವಾರ ಒಂದು ರಜೆ ಹಾಕಿದರೆ ಮಂಗಳವಾರ ಸ್ವಾತಂತ್ರ್ಯೋತ್ಸವದ ಸರ್ಕಾರಿ ರಜೆ. ಸರಣಿ ರಜೆ ಇರುವುದರಿಂದ ನೌಕರರು ಊರುಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳವರು ಪ್ರಯಾಣದರ ದುಪ್ಪಟ್ಟು ಮಾಡಿ ಸುಲಿಗೆ ಮಾಡುತ್ತಿದ್ದಾರೆ. ಕೆಎಸ್‍ಆರ್‍ಟಿಸಿಯವರು ಹೆಚ್ಚು ಬಸ್‍ಗಳ ವ್ಯವಸ್ಥೆ ಕಲ್ಪಿಸಿದ್ದರೂ ಖಾಸಗಿ ಬಸ್‍ಗಳವರು ದರ ಹೆಚ್ಚಿಸಿ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿಯವರು ಸೂಚಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸರಣಿ ರಜೆ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವವರು ಹೆಚ್ಚಾಗಿರುವುದರಿಂದ ಸಹಜವಾಗಿ ಬಸ್‍ಗಳನ್ನು ಅವಲಂಬಿಸುವುದು ಹೆಚ್ಚಾಗಿರುತ್ತದೆ. ಸಾರಿಗೆ ಇಲಾಖೆಯಿಂದ ಹೆಚ್ಚುವರಿಯಾಗಿ 500 ಬಸ್‍ಗಳನ್ನು ಒದಗಿಸಲಾಗಿದೆ. ಖಾಸಗಿಯವರು ದರ ದುಪ್ಪಟ್ಟು ಮಾಡುತ್ತಿದ್ದಾರೆ ಎಂದು ಕೇಳಿ ಬಂದಿದೆ.

ಯಾರಾದರೂ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಪರವಾನಗಿ ಪಡೆದವರು ಪ್ರಯಾಣಿಕರನ್ನು ಕೊಂಡೊಯ್ಯಲು ನಮ್ಮದೇನೂ ಅಭ್ಯಂತರವಿಲ್ಲ. ಆದರೂ ಪ್ರಯಾಣಿಕರನ್ನು ಸುಲಿಗೆ ಮಾಡುವುದು ಅಪರಾಧವಾಗುತ್ತದೆ. ಈ ಬಗ್ಗೆ ಪರಿಶೀಲಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Facebook Comments

Sri Raghav

Admin