ಅಸ್ಸಾಂನಲ್ಲಿ ಭಾರೀ ಪ್ರವಾಹದಿಂದ 15 ಜಿಲ್ಲೆಗಳು ಅತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Assam--01

ಗುವಾಹತಿ, ಆ.12-ಈಶಾನ್ಯ ರಾಜ್ಯ ಅಸ್ಸಾಂ ಮತ್ತೆ ಭಾರೀ ಮಳೆ ಮತ್ತು ನೆರೆ ಹಾವಳಿಯಿಂದ ತತ್ತರಿಸಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ 15 ಜಿಲ್ಲೆಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‍ಡಿಎಂಎ) ವರದಿಗಳ ಪ್ರಕಾರ, ಈಶಾನ್ಯ ರಾಜ್ಯದ 15 ಜಿಲ್ಲೆಗಳ 781 ಹಳ್ಳಿಗಳ 3.55 ಲಕ್ಷ ಮಂದಿ ಜಲಪ್ರಳಯದಿಂದ ಸಂತ್ರಸ್ತರಾಗಿದ್ದಾರೆ.

ಸತತ ಮಳೆಯಿಂದಾಗಿ ಬ್ರಹ್ಮಪುತ್ರ ನದಿ ಮತ್ತು ಅದರ ಉಪನದಿಗಳು ಅಪಾಯದ ಮಟ್ಟವನ್ನು ಮೀರಿ ಭೋರ್ಗರೆಯುತ್ತಿವೆ. ಪ್ರವಾಹದ ನೀರಿನಲ್ಲಿ 20,000 ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿವೆ.  ನೆರೆ ಹಾವಳಿಯಿಂದ ತೀವ್ರ ತೊಂದರೆಗೆ ಸಿಲುಕಿದ್ದ 14,000 ನಿರಾಶ್ರಿತರಿಗೆ 39 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಎಎಸ್‍ಡಿಎಂಎ ವರದಿ ತಿಳಿಸಿದೆ.   ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸೂಚಿಸಿದ್ದಾರೆ.

Facebook Comments

Sri Raghav

Admin