ಈಜಿಪ್ಟ್’ನಲ್ಲಿ ರೈಲುಗಳ ಡಿಕ್ಕಿ : 36 ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

TRain--01

ಕೈರೋ, ಆ.12-ಎರಡು ರೈಲುಗಳ ನಡುವೆ ಡಿಕ್ಕಿಯಾಗಿ 36 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಭೀಕರ ಘಟನೆ ಈಜಿಪ್ಟ್ ನ ಕರಾವಳಿ ನಗರ ಅಲೆಗ್ಸಾಂಡ್ರಿಯಾದಲ್ಲಿ ನಿನ್ನೆ ಸಂಭವಿಸಿದೆ. ರಾಜಧಾನಿ ಕೈರೋಗೆ ತೆರಳುತ್ತಿದ್ದ ರೈಲು ಸಬ್‍ಅರ್ಬನ್ ಖೋರ್ಷಿದ್ ನಿಲ್ದಾಣದ ಬಳಿ ಮತ್ತೊಂದು ರೈಲಿನ ಡಿಕ್ಕಿ ಹೊಡೆಯಿತು. ಈ ದುರ್ಘಟನೆಯಲ್ಲಿ ಒಂದು ರೈಲಿ ಎಂಜಿನ್ ಮತ್ತು ಇನ್ನೊಂದು ರೈಲಿನ ಎರಡು ಬೋಗಿಗಳು ಹಳಿ ತಪ್ಪಿದವು ಎಂದು ಈಜಿಪ್ಟ್ ರೈಲ್ವೆ ಪ್ರಾಧಿಕಾರ ತಿಳಿಸಿದೆ.

TRain--02

ರೈಲುರೋಡ್‍ನ ಸ್ವಿಚ್ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಈ ಅಪಘಾತದಲ್ಲಿ ಈವರೆಗೆ 36 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 100ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ದುರಂತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಮುಂದುವರಿದಿವೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

Facebook Comments

Sri Raghav

Admin