ಎನ್‍ಕೌಂಟರ್’ನಲ್ಲಿ ಕುಖ್ಯಾತ ದರೋಡೆಕೋರನ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಮುಜಾಫರ್‍ನಗರ್, ಆ.12-ವ್ಯಕ್ತಿಯೊಬ್ಬನನ್ನು ದರೋಡೆ ಮಾಡಿ ಪರಾರಿಯಾಗುತ್ತಿದ್ದಾಗ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕುಖ್ಯಾತ ದರೋಡೆಕೋರನೊಬ್ಬ ಬಲಿಯಾದ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ. ಗುಂಡಿನ ಕಾಳಗದಲ್ಲಿ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ.  ಹತನಾದ ಆರೋಪಿಯಿಂದ 87,000 ರೂ. ನಗದು ಮತ್ತು ಪಿಸ್ತೂಲ್‍ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹತನಾದ ಮೋನು ದರೋಡೆ, ಸುಲಿಗೆ, ಲೂಟಿ, ಕೊಲೆ ಸೇರಿದಂತೆ 14 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ಎಸ್‍ಪಿ ಅಜಯ್ ಪಾಲ್ ಶರ್ಮ ತಿಳಿಸಿದ್ದಾರೆ.  ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ತನ್ನ ತಲೆಗೆ 12,000 ಬಹುಮಾನ ಹೊತ್ತಿದ್ದ ಮತ್ತೊಬ್ಬ ಕುಖ್ಯಾತ ಕ್ರಿಮಿನಲ್‍ನನ್ನು ಖತೌಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

Facebook Comments

Sri Raghav

Admin