ಕರ್ನಾಟಕದಲ್ಲಿ ‘ಅಬ್ ಕೀ ಬಾರ್ ಭಾಜಾಪ ಸರ್ಕಾರ್’ : ಅಮಿತ್ ಷಾ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah-01

ಬೆಂಗಳೂರು, ಆ.12- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಣೆ ಮಾಡುವ ಮೂಲಕ ಎಲ್ಲಾ ವದಂತಿಗಳಿಗೆ ಮತ್ತೆ ತೆರೆ ಎಳೆದಿದ್ದಾರೆ. ತಮ್ಮ ಮೂರು ದಿನಗಳ ರಾಜ್ಯ ಪ್ರವಾಸಕ್ಕಾಗಿ ಇಂದು ನಗರಕ್ಕೆ ಆಗಮಿಸಿದ ಅವರು, ಸಾದರಹಳ್ಳಿ ಗೇಟ್ ಬಳಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶೀಸಿ ಮಾತನಾಡುವ ವೇಳೆ ಭಾವಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪನವರೇ ಎಂದು ಘೋಷಿಸಿದರು.

ಈ ವೇಳೆ ನೆರೆದ್ದಿದ ಬಿಜೆಪಿಯ ಸಾವಿರಾರು ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. 2018ರ ವಿಧಾನಸಭೆ ಚುನಾವಣೆ ಬಿಎಸ್‍ವೈ ನೇತೃತ್ವದಲ್ಲೇ ನಡೆಯಲಿದೆ. ಅವರೇ ನಮ್ಮ ಪಕ್ಷದ ಮುಖ್ಯಮಂತ್ರಿ ಎಂದು ಪುನರುಚ್ಚರಿಸಿದರು.  ಯಡಿಯೂರಪ್ಪ ಸಾರಥ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಇದಕ್ಕಾಗಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ತಮ್ಮೆಲ್ಲಾ ಹಿತಾಸಕ್ತಿಗಳನ್ನು ಮರೆತು ಪಕ್ಷಕ್ಕಾಗಿ ಸಮರ್ಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ನಮ್ಮ ಮುಂದೆ ಬಹುದೊಡ್ಡ ಸವಾಲು ಇದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಜನಾಂದೋಲನ ರೂಪಿಸಬೇಕು. ಕಾಂಗ್ರೆಸ್ ಮುಕ್ತ ಭಾರತವಾಗಬೇಕಾದರೆ ಕಾರ್ಯಕರ್ತರೆಲ್ಲರೂ ಇಂದಿನಿಂದಲೇ ಹಗಲಿರುಳು ಶ್ರಮಿಸಬೇಕೆಂದು ಮನವಿ ಮಾಡಿದರು. ಐದು ವರ್ಷಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕೆಂದರೆ ಸಣ್ಣ ಮಾತಲ್ಲ. ಉತ್ತರ ಪ್ರದೇಶ, ಉತ್ತರಾಖಂಡ್ ಸೇರಿದಂತೆ ಹಲವೆಡೆ ನಾವು ಯಾವ ರೀತಿ ಸ್ಥಳೀಯ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಅಧಿಕಾರಕ್ಕೆ ಬಂದೆವು ಎಂಬುದನ್ನು ಮರೆಯಬಾರದು. ಪಕ್ಷಕ್ಕಾಗಿ ನಾನು ಎಂಬುದು ನಿಮ್ಮ ಗುರಿಯಾಗಬೇಕೇ ಹೊರತು ಪಕ್ಷ ನನಗೇನು ಕೊಟ್ಟಿದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದಂತೆ ಸೂಚಿಸಿದರು.

Amit-Shah-01

ಅಬ್ ಕೀ ಬಾರ್ ಭಾಜಾಪ ಸರ್ಕಾರ್:

ತಮ್ಮ ಮಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳು, ಮೋದಿ ನಾಯಕತ್ವವವನ್ನು ಗುಣಗಾನ ಮಾಡಿದ ಅಮಿತ್ ಶಾ, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ದಕ್ಷಿಣ ಭಾರತದಲ್ಲಿ ಕಮಲ ಅರಳಿಸಲು ಟೊಂಕ ಕಟ್ಟಲು ಕಾರ್ಯಕರ್ತರಿಗೆ ಕರೆಕೊಟ್ಟರು.ಕಳೆದ ಮೂರೂವರೆ ವರ್ಷಗಳಿಂದ ಕೇಂದ್ರದಲ್ಲಿರುವ ಎನ್‍ಡಿಎ ಸರ್ಕಾರ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದೆ. ಭ್ರಷ್ಟಾಚಾರ ರಹಿತ, ಜನಪರ, ಭಯೋತ್ಪಾದನೆ ನಿಗ್ರಹ, ನಮ್ಮ ಸರ್ಕಾರದ ಮುಖ್ಯಗುರಿಯಾಗಿದೆ.  ಇಡೀ ವಿಶ್ವವೇ ಇಂದು ಭಾರತದ ನಾಯಕತ್ವವನ್ನು ಎದುರು ನೋಡುತ್ತಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದ ಚಿತ್ರಣವೇ ಬದಲಾಗಿದ್ದು, ಕಾರ್ಯಕರ್ತರು ಇದೇ ರೀತಿ ಪಕ್ಷಕ್ಕೆ ಒಳ್ಳೆಯ ಹೆಸರು ತರಲು ತೊಡಗಿಸಿಕೊಳ್ಳಬೇಕೆಂದು ಕರೆ ಕೊಟ್ಟರು.

Facebook Comments

Sri Raghav

Admin