ಕ್ಯಾಂಪಸ್‍ನಲ್ಲಿ ಕನ್ನಡ ಬಾವುಟ ಹಾರಿಸದಂತೆ ಪತ್ರ ಬರೆದ ರಾಜಸ್ಥಾನ್ ವಿದ್ಯಾರ್ಥಿ

ಈ ಸುದ್ದಿಯನ್ನು ಶೇರ್ ಮಾಡಿ

Kannada-Flag--01

ಬೆಂಗಳೂರು, ಆ.12- ನಗರದ ಪ್ರತಿಷ್ಠಿತ ಕಾಲೇಜಿನ ಕ್ಯಾಂಪಸ್‍ನಲ್ಲಿ ಕನ್ನಡ ಬಾವುಟ ಹಾರಿಸದಂತೆ ರಾಜಸ್ಥಾನ ಮೂಲದ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದು, ಇದು ತಡವಾಗಿ ಬೆಳಕಿಗೆ ಬಂದಿದೆ. ರಾಜಸ್ಥಾನ ಮೂಲದ ಮಧೂಪ್‍ಗುಪ್ತ, ಆರ್‍ವಿ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದು, ಕ್ಯಾಂಪಸ್‍ನಲ್ಲಿ ಕನ್ನಡ ಬಾವುಟ ಹಾರಿಸದಂತೆ ಪ್ರಾಂಶುಪಾಲರಿಗೆ ಇ-ಮೇಲ್ ಮೂಲಕ ಪತ್ರ ಬರೆದಿದ್ದಾನೆ.

ಕ್ಯಾಂಪಸ್‍ನಲ್ಲಿ ಕನ್ನಡ ಧ್ವಜ ಹಾರಿಸಿದರೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕ್ಷಮಾಪಣೆ ಕೇಳಿದ್ದಾನೆ.

Facebook Comments

Sri Raghav

Admin